ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಹತ್ತು ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಉತ್ತಮ ಕೊಡುಗೆ ನೀಡಿದ ಸಾಣಿಕೆರೆಯ ವಶಿಷ್ಠ ಶೈಕ್ಷಣಿಕ ಅಭಿವೃದ್ದಿ ಅಕಾಡೆಮೆಯ ವೇದ ಶಿಕ್ಷಣ ಸಂಸ್ಥೆ ದಶಮಾನೋತ್ಸವ ಕಾರ್ಯಕ್ರಮ ಜ.೨೨ರಂದು ಮಧ್ಯಾಹ್ನ ೧೨ಕ್ಕೆ ಸಂಸ್ಥೆಯ ಆವರಣದಲ್ಲಿ ನಡೆಯುವುದು ಎಂದು ಕಾರ್ಯದರ್ಶಿ ಡಿ.ಆರ್.ಕಿರಣ್ ತಿಳಿಸಿದ್ದಾರೆ.
ಅವರು, ಈ ಬಗ್ಗೆ ಮಾಹಿತಿ ನೀಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರ ನೀಡಿದ ವಿದ್ಯಾರ್ಥಿಗಳು, ಪೋಷಕ ವೃಂದ, ಅಧಿಕಾರಿಗಳು, ಸಾರ್ವಜನಿಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿವಾನುಭವ ಶಿವರುದ್ರಸ್ವಾಮೀಜಿ, ವೀರಭದ್ರ ಶಿವಾಚಾರ್ಯಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಸಂಸದ ಗೋವಿಂದ ಎಂ.ಕಾರಜೋಳ, ಚಿತ್ರನಟಿ ಶ್ರುತಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಬಿಜೆಪಿಅಧ್ಯಕ್ಷ ಟಿ.ಕೆ.ಕುಮಾರಸ್ವಾಮಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಡಿ.ಟಿ.ರವೀಂದ್ರ ವಹಿಸುವರು.
ಅಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾರಾಮೆರಗು ನೀಡಿದ್ದು, ಜನಪ್ರಿಯ ಹಾಸ್ಯನಟ ಮಿಮಿಕ್ರಿದಯಾನಂದ ಕಾಮಿಡಿಶೋ, ವಿದ್ಯಾರ್ಥಿಗಳಿಂದ ಸಂಪೂರ್ಣರಾಮಾಯಣ ಪೌರಾಣಿಕ ನಾಟಕ, ವಿಶೇಷ ಆಹ್ವಾನಿತರಾಗಿ ಚಿತ್ರನಟರಾದ ಧನ್ಯಾರಾಮ್ಕುಮಾರ್, ಚೈತ್ರ ವಾಸುದೇವನ್, ಪೃಥ್ವಿ ಅಂಬರ್ ಭಾಗವಹಿಸಲಿದ್ದು, ದಶಮಾನೋತ್ಸವ ಕಾರ್ಯಕ್ರಮದ ಸವಿನೆನಪಿಗಾಗಿ ಹೆಲಿಕಾಪ್ಟರ್ ಮೂಲಕ ಪುಪ್ಪ ಸಿಂಚನವಾಗಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿಡಿಪಿಐ ಆರ್.ಮಂಜುನಾಥ, ಬಿಇಒ ಕೆ.ಎಸ್.ಸುರೇಶ್, ಸಹಕಾರಿ ದುರೀಣ ಆರ್.ಮಲ್ಲೇಶಪ್ಪ, ವಕೀಲ ಬಿ.ಎಂ.ಆನಂದಪ್ಪ, ಗ್ರಾಪಂ ಅಧ್ಯಕ್ಷ ನಾಗರಾಜು ಮುಂತಾದವರು ಉಪಸ್ಥಿತರಿರುವರು.
ದಶಮಾನೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಧಾನವ್ಯವಸ್ಥಾಪಕ ಆರ್.ವಿಜಯ್, ಪ್ರಾಂಶುಪಾಲೆ ಬಿ.ಆರ್.ಪುಪ್ಪರಾಣಿ, ಪ್ರಾಚಾರ್ಯ ಸಿ.ಎಂ.ಸಂದೀಪ್, ಅಧೀಕ್ಷಕ ಸಿ.ವಿರೂಪಾಕ್ಷಪ್ಪ, ಶೈಕ್ಷಣಿಕ ಸಂಯೋಜಕ ಕೆ.ಪ್ರಕಾಶ್ ಮನವಿ ಮಾಡಿದ್ಧಾರೆ.

