ಎಂಎಸ್ ಜಿಪಿ ಘಟಕಕ್ಕೆ ಹೆಚ್ಚುವರಿ ಕಸ ವಿಲೇವಾರಿ-ಶಾಸಕರ ಆಕ್ರೋಶ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಎಂ ಎಸ್ ಜಿ ಪಿ ಘಟಕಕ್ಕೆ ಹೆಚ್ಚುವರಿ ಕಸ ವಿಲೇವಾರಿಯಾಗುತ್ತದೆ ಎಂಬ ಮಾಹಿತಿ ಹಿನ್ನಲೆ ಇಂದು ಸ್ಥಳೀಯ ಮುಖಂಡರ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹೆಚ್ಚುವರಿ ಲಾರಿಗಳನ್ನು ತಡೆಯಲಾಗಿದೆ ಎಂದು ಬಿಜೆಪಿ ಯುವ ಘಟಕದ ರಾಜ್ಯಾಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜು ತಿಳಿಸಿದರು.

 ತಾಲ್ಲೂಕಿನ ಎಂ ಎಸ್ ಜಿ ಪಿ – ದೊಡ್ಡಮಂಕನಾಳ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಸದ ಲಾರಿಗಳನ್ನು ತಡೆದು ನೆಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿನಿತ್ಯ 75 ಕಸದ ವಾಹನಗಳು ಬರಲು ಅನುಮತಿ ಇದೆ ಆದರೆ ಇಂದು ಹೆಚ್ಚುವರಿ ವಾಹನಗಳು ಬರುತ್ತವೆ ಎಂಬ ಮಾಹಿತಿ ಹಿನ್ನಲೆ ಇಂದು ಕಸದ ವಾಹನಗಳನ್ನು ತಡೆಯಿಡಿಯಲಾಗಿದೆ.

- Advertisement - 

 ಕಸವಿಲೇವಾರಿ ಎಂ ಎಸ್ ಜಿ ಪಿ ಘಟಕದ ವಿರುದ್ಧ ನಮ್ಮ ಹೋರಾಟ ಸತತವಾಗಿ 3ವರ್ಷಗಳಿಂದ ನೆಡೆಯುತ್ತಿದ್ದು, ಸ್ಥಳೀಯ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸದನದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಬಳಿ ಹಲವು ಬಾರಿ ಮನವಿ ಮಾಡಿದ್ದೇನೆ. ಎಂ ಎಸ್ ಜಿ ಪಿ ಕಸವಿಲೇವಾರಿ ಘಟಕ ನಿಲ್ಲುವವರೆಗೂ ನಮ್ಮ ಹೋರಾಟ ನಿರಂತರ ನೆಡೆಯಲಿದೆ  ಎಂದರು. 

ಇಲ್ಲಿ ನಾವು ತಡೆದಿರುವ ಸಾಕಷ್ಟು ವಾಹನಗಳಿಗೆ ಸೂಕ್ತ ದಾಖಲಾತಿಗಳಿಲ್ಲ ಅಲ್ಲದೆ ಈ ವಾಹನಗಳು ಪ್ರತಿನಿತ್ಯ ಸಂಚಾರಿಸುವ ವಾಹನಗಳಲ್ಲ , ವಾಹನಗಳಿಗೆ ತೆರಿಗೆ ಪವತಿಯಾಗಿಲ್ಲ ಈ ಕುರಿತು ಸಂಚಾರಿ ಪೊಲೀಸ್ ಗಮನಕ್ಕೆ ತಂದಿದ್ದು ಅಧಿಕಾರಿಗಳು ಅಂತಹ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ ಎಂದರು.

- Advertisement - 

Share This Article
error: Content is protected !!
";