ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತಯಂತ್ರ , ಕಾನೂನು- ಸುವ್ಯವಸ್ಥೆ , ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿದೆ ಜೆಡಿಎಸ್ ಗಂಭೀರ ಆರೋಪಿಸಿದೆ.
ರೌಡಿಗಳು, ಪುಂಡ ಪೋಕರಿಗಳ ಉಪಟಳ ಜಾಸ್ತಿಯಾಗುತ್ತಿದ್ದು, ಹೇಳುವವರು, ಕೇಳುವವರು ಇಲ್ಲವಾಗಿದೆ ಎಂದು ಆರೋಪ ಮಾಡಿದೆ.
ಭ್ರಷ್ಟ ಮುಖ್ಯಮಂತ್ರಿ, ರೌಡಿಶೀಟರ್ ಉಪಮುಖ್ಯಮಂತ್ರಿ, ಅಸಮರ್ಥ, ನಿಷ್ಪ್ರಯೋಜಕ ಗೃಹಮಂತ್ರಿ, ಆಡಳಿತವನ್ನು ಕಳ್ಳಕಾಕರು,
ಡಕಾಯಿತರಿಗೆ ಒಪ್ಪಿಸಿ ರಾಜ್ಯವನ್ನು ಲೂಟಿ ಹೊಡೆಯುವುದರಲ್ಲಿ ಮಗ್ನರಾಗಿದ್ದು, ಜನಸಾಮಾನ್ಯರ ಸುರಕ್ಷತೆಯನ್ನು ಕಡೆಗಣಿಸಿದ್ದಾರೆ ಎಂದು ಅವರು ಜೆಡಿಎಸ್ ದೂರಿದೆ.

