ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿಶ್ವವಿದ್ಯಾಲಯಗಳಲ್ಲಿ ಬಿ.ಎ.ಎಂ.ಎಸ್ ಪದವಿ ಕೋರ್ಸ್‍ನ ವ್ಯಾಸಂಗ ಮಾಡಲು ಪಾರಂಪರಿಕ ವೈದ್ಯರ ಮಕ್ಕಳಿಗೆ ವಿಶೇಷ ಪ್ರಕರಣದಡಿ ಪ್ರವೇಶಾತಿ ಪರಿಗಣಿಸಿ 2017-18ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಸರ್ಕಾರಿ ಕೋಟಾ ಸೀಟುಗಳಲ್ಲಿ ಎರಡು ಸೀಟುಗಳನ್ನು ಮೀಸಲಿರಿಸಿದೆ.
ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬಳ್ಳಾರಿ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಮೈಸೂರು ಇಲ್ಲಿ ತಲಾ ಒಂದು ಸೀಟನ್ನು ಕಾಯ್ದಿರಿಸಲಾಗಿದೆ.
ಬಿ.ಎ.ಎಂ.ಎಸ್ ಪದವಿ ಕೋರ್ಸ್‍ನ ಪ್ರವೇಶಾತಿಗೆ National Commission for India System of Medicine, ನವದೆಹಲಿ ಇವರು ನೀಟ್ ಪರೀಕ್ಷೆಯ ಅರ್ಹತೆಯನ್ನು ಹೊಂದುವುದು ಕಡ್ಡಾಯಗೊಳಿಸಲಾಗಿರುತ್ತದೆ ಆದ್ದರಿಂದ ಅರ್ಹ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಿಯಮಾನುಸಾರ ನೀಟ್ ರ್ಯಾಂಕ್ ಜೇಷ್ಠತೆಯ ಆಧಾರದ ಮೇಲೆ ಅವಕಾಶ ಕಲ್ಪಿಸಲಾಗುವುದು.
ಪಾರಂಪರಿಕ ವೈದ್ಯರ ಮಕ್ಕಳು 2025-26ನೇ ಶೈಕ್ಷಣಿಕ ಸಾಲಿನಲ್ಲಿ ನೀಟ್ ಪರೀಕ್ಷೆಯಲ್ಲಿ ಭಾಗವಹಿಸಿ ಅರ್ಹತೆ ಪಡೆದ ವಿದ್ಯಾರ್ಥಿಗಳು ಮಾತ್ರ ಈ ಸೀಟುಗಳ ಪ್ರವೇಶಾತಿಗೆ ಅರ್ಜಿಗಳನ್ನು 2025ರ ಸೆಪ್ಟೆಂಬರ್ 5 ರ ಸಂಜೆ 5:30 ರೊಳಗಾಗಿ ಆಯುಷ್ ನಿರ್ದೇಶನಾಲಯ, ಧನ್ವಂತರಿ ರಸ್ತೆ, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಆಯಾ ಜಿಲ್ಲೆಗಳ ಜಿಲ್ಲಾ ಆಯುಷ್ ಆಧಿಕಾರಿಗಳನ್ನು ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.

