ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೊಡಿಹಳ್ಳಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ 134 ನೆಯ ಜಯಂತಿ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಮುದಾಯದ ಎಲ್ಲ ಯುವಕರ ಸಮ್ಮುಖದಲ್ಲಿ ಮುಖಂಡರಾದ ಸಣ್ಣ ನಾಗಯ್ಯ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಹಾ ನಾಯಕನ ಸಾಧನೆಗಳ ಕುರಿತು ಜನರಿಗೆ ತಿಳಿಸಲಾಯಿತು. ತಿಪ್ಪೇಸ್ವಾಮಿ.ಯು ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿದರು.
ಸಮುದಾಯದ ಯಜಮಾನರು, ಯುವಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಲಘು ಉಪಹಾರ, ಕೇಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಲಿಂಗರಾಜು.ಡಿ, ತಿಪ್ಪೇಸ್ವಾಮಿ, ಮಂಜುನಾಥ್, ವಿಜಯ್ ಕುಮಾರ್.ಡಿ, ರುದ್ರಮುನಿ, ಶ್ರೀಧರ್.ಎಚ್, ರಾಜು.ಡಿ, ಮೈಲಾರಿ.ಕೆ, ನಂದೀಶ್.ಓ , ಮೋಹನ್ ಕುಮಾರ್.ಡಿ, ಅರುಣ್ ಕುಮಾರ್.ಟಿ, ತಿಪ್ಪೇಸ್ವಾಮಿ.ಎಸ್.ಎನ್ ,ಶಿವಪ್ಪ,ಮನೋಜ್, ಪರಶುರಾಮ್, ತಿಪ್ಪೇಸ್ವಾಮಿ.ಪಿ.ಎಂ, ಅಶೋಕ್,ಕಿರಣ್, ರಮೇಶ್, ಕೆ.ಟಿ,ಸ್ವಾಮಿ.ಆರ್, ದುರುಗೇಶ್, ಪರಮೇಶ್,ಗೋಪಿ,ಮಲ್ಲಿಕಾರ್ಜುನ್.ಜಿ, ಮಹೇಶ್, ಜೀವನ್, ಕೋಟೇಶ್, ಕಣುಮೇಶ್, ಮಂಜು,ಉಪಸ್ಥಿತರಿದ್ದರು.