ರಾಮಾಯಣ ಮಹಾಕಾವ್ಯದ ಮೌಲ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಿ-ಶಾಸಕ ದೀರಜ್ ಮುನಿರಾಜ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಟೀಯ ಹಬ್ಬಗಳ ಅಚರಣಾ ಸಮಿತಿಯಿಂದ ತಾಲೂಕು ಆಡಳಿತದ ವತಿಯಿಂದ
  ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ  ಶಾಸಕ ಧೀರಜ್ ಮುನಿರಾಜು ಮಾತನಾಡಿ, ರಾಮಾಯಣ ಮಹಾಕಾವ್ಯದ ಮೌಲ್ಯ ಬದುಕಿನಲ್ಲಿ ಅಳ ವಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು. ಸಂಜಯನಗರದಲ್ಲಿ ನಿರ್ಮಾಣವಾಗುತ್ತಿರುವ ಹೊಸ ವಾಲ್ಮೀಕಿ ಭವನಕ್ಕೆ ತಮ್ಮ ಅನುದಾನ ನಿಧಿಯಿಂದ ₹24 ಲಕ್ಷ ನೀಡಿರುವುದಾಗಿ ತಿಳಿಸಿದರು. ಮುಂದಿನ ವರ್ಷ ಈ ಹೊಸ ಭವನದಲ್ಲಿಯೇ ಜಯಂತಿ ಆಚರಿಸಲಾಗುವುದು ಎಂದರು.

- Advertisement - 

ತಾಲೂಕು ಕಚೇರಿ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.  

ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತ ಆರ್.ಕಾರ್ತಿಕೇಶ್ವರ, ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ, , ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಪಿ.ಎನ್. ಶೇಷಾದ್ರಿ, ವಾಲ್ಮೀಕಿ ಸಮುದಾಯದ ಮೆಳೇಕೋಟೆ ಬ್ರಹ್ಮಾನಂದ ಸ್ವಾಮೀಜಿ, ತಾಲ್ಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷ ಕುಮಾ‌ರ್, ಗೌರವ ಅಧ್ಯಕ್ಷ ಮುನಿಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ಕೇಬಲ್ ರಾಮಚಂದ್ರ, ಮುಖಂಡರಾದ ಸಂಜೀವ್‌ನಾಯ್ಕ, ಮುನಿಕೃಷ್ಣ ಇದ್ದರು.

- Advertisement - 

 

 

Share This Article
error: Content is protected !!
";