ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಮೋದಿ ಸರ್ಕಾರದ ಪ್ರತಿಕೂಲ ನೀತಿಗಳು, ತೆರಿಗೆ ಹೇರಿಕೆ, ಬೆಲೆ ಏರಿಕೆ, ನಿರುದ್ಯೋಗ, ಜಿಡಿಪಿ ಕುಸಿತದ ಕಾರಣಕ್ಕೆ ಲಕ್ಷಾಂತರ ಭಾರತೀಯರು ದೇಶ ಬಿಟ್ಟು ವಲಸೆ ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಭಾರತದಿಂದ ಅಮೇರಿಕಾಕ್ಕೆ ಅಕ್ರಮವಾಗಿ ವಲಸೆ ಹೋಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
ಮೋದಿಯವರ ವಿಕಾಸ ಕಾಲದ ಅಚ್ಚೇದಿನಗಳಲ್ಲಿ ಭಾರತೀಯರು ದೇಶ ತೊರೆದು ಅಕ್ರಮವಾಗಿ ವಲಸೆ ಹೋಗಿ ಬದುಕು ಕಟ್ಟಿಕೊಳ್ಳುವ ಸ್ಥಿತಿ ನಿರ್ಮಾಣವಾಗಿರುವುದು ದುರಂತ! ಎಂದು ಕಾಂಗ್ರೆಸ್ ಟೀಕಿಸಿದೆ.

