ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಈ ಸಲ ಕಪ್ ನಮ್ಮದೇ” ಅಂತಿಮ IPL ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಪ್ರಚಂಡ ಗೆಲುವಿನ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ RCB ತಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
18 ವರ್ಷಗಳ ಕನ್ನಡಿಗರ ಕಾಯುವಿಕೆ, ದೇಶದ ಕ್ರಿಕೆಟ್ ಅಭಿಮಾನಿಗಳ ಹಾರೈಕೆಗೆ ತಕ್ಕ ಪ್ರತಿಫಲ ದೊರೆತಿದೆ. ತಮ್ಮ ನಿರಂತರ ಪರಿಶ್ರಮ ಹಾಗೂ ವಿರೋಚಿತ ಆಟದೊಂದಿಗೆ ಕನ್ನಡಿಗರ ಮನೆ ಮನ ಗೆದ್ದ ಪ್ರತಿಯೊಬ್ಬ ಆರ್.ಸಿ.ಬಿ ಆಟಗಾರರಿಗೂ ಅನಂತ ಅಭಿನಂದನೆಗಳು. ಈಗ ವಿಶ್ವ ಕ್ರಿಕೆಟ್ ಪ್ರೇಮಿಗಳೂ ಸಂಭ್ರಮಿಸಿ ಹೇಳುತ್ತಿದ್ದಾರೆ ‘ಕಪ್ ನಮ್ಮದೇ‘ ಎಂದು ವಿಜಯೇಂದ್ರ ತಿಳಿಸಿದ್ದಾರೆ.