ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನ ಪರಿಷತ್‌ನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ವಿಧೇಯಕ-2025ರ ಕುರಿತ ಚರ್ಚೆಯಲ್ಲಿ, ವಿಧಾನ ಪರಿಷತ್‌ಸದಸ್ಯರಾದ ಎಸ್.ಎಲ್ ಭೋಜೇಗೌಡ ಅವರು ಮಾತನಾಡಿದರು.
ಪೌಷ್ಠಿಕಾಂಶಯುಕ್ತ ಆಹಾರ ಧಾನ್ಯವಾದ ರಾಗಿಯ ಮಹತ್ವವನ್ನು ಸದನದಲ್ಲಿ ವಿವರಿಸಿದ ಅವರು, ಹೆಚ್.ಡಿ. ದೇವೇಗೌಡರು ಪ್ರಧಾನಿಯಾದ ಮೇಲೆ ಪಂಚತಾರಾ ಹೋಟೇಲ್‌ಗಳಲ್ಲೂ ರಾಗಿ ಮುದ್ದೆ ಸಿಗುವಂತಾಯ್ತು ಎಂದು ನೆನೆದರು.
ಮಂಡ್ಯದಲ್ಲಿ ನೂತನ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು. ಯುವಕರು ಕೃಷಿಯತ್ತ ಮುಖಮಾಡಬೇಕು, ಕೃಷಿ ಕ್ಷೇತ್ರ ಪ್ರಗತಿ ಸಾಧಿಸಲು ಮತ್ತು ಲಾಭದಾಯಕ ಕ್ಷೇತ್ರವಾಗಲು, ಆಹಾರ ಧಾನ್ಯಗಳ ಗುಣಮಟ್ಟ ಸುಧಾರಿಸಲು ಕೃಷಿ ವಿವಿಗಳು ಬೇಕು ಎಂದು ಭೋಜೇಗೌಡ ಒತ್ತಾಯಿಸಿದರು.