ಮತ್ತೆ ನೆನಪಾದಳು ಅವ್ವ…!!

News Desk

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು
ಮತ್ತೆ ನೆನಪಾದಳು ಅವ್ವ…!!

ಅವ್ವನಿಲ್ಲದ
ಸಂವತ್ಸರದ ಹೆಬ್ಬಾಗಿಲ ಮಾಸ,
ಚಂದಿರನಿಲ್ಲದ ಕಾಡ ಇರುಳ
ನೆನಪಿನಂಗಳದಿ ಕನಸು ಚಿಗುರಿ
ಕಮರಿವೆ.

ಮಮಕಾರದಿ ನನ್ನವ್ವ
ಮಗನೆಂಬ ತುರಗದ
ತುರುಬಿಗೆ ಜೀನು ಕಟ್ಟಿ
ಭುಜ ತಟ್ಟಿ, ಬದುಕೆಂಬ ಬಯಲಲ್ಲಿ
ಜೂಜು ಬಿಟ್ಟವಳು

ಜೀವ ಸೆಲೆ ನಿನ್ನೆದೆಯ ಅನುರಾಗ
ಉಂಡ ನನಗೆ ಸಿಡುಕು ಕೋಪಗಳಿಲ್ಲ
ಅವ್ವನಿಲ್ಲದ ಹೃದಯದ ಪುಷ್ಕರಣಿಯಲಿ
ಪ್ರೀತಿಯ ಪುಷ್ಪಗಳು ಅರಳಲಿ
ಅವ್ವನ ನಿಜ ಪ್ರೀತಿಯ ತೋರಣದಿ
ನೆನಪುಗಳು ಮತ್ತೆ ಮತ್ತೆ ಚಿಗುರಲಿ!!
ಕವಿತೆ-ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು.

- Advertisement -  - Advertisement - 
Share This Article
error: Content is protected !!
";