ಮೇ 5 ಮತ್ತು 6 ರಂದು ಪಿಯು ಪಾಸ್ ಆದ ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ತರಬೇತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿ ಕೋಟಾದಡಿ, ರಾಜ್ಯದ ಕೃಷಿ ಹಾಗೂ ಸಂಬಂಧಿತ ವಿಶ್ವ ವಿದ್ಯಾನಿಲಯಗಳಿಗೆ ಪ್ರಸ್ತುತ ಸಾಲಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಉದ್ದೇಶಿತ ಕೃಷಿ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ಮೇ 5 ಮತ್ತು 6 ರಂದು ಚಿತ್ರದುರ್ಗ ನಗರದ .ಪಿ.ಎಂ.ಸಿ ಆವರಣದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಏರ್ಪಡಿಸಿದ್ದು, ಆಸಕ್ತ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

     ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನಗಾರಿಕೆ, ಅರಣ್ಯ, ರೇಷ್ಮೆ, ಹಣ್ಣು, ತರಕಾರಿ, ಬಿತ್ತನೆ ಬೀಜ, ಆಹಾರಧಾನ್ಯ, ಕೃಷಿ ಪರಿಕರಗಳ ಬಗ್ಗೆ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಲ್ಲಿ ಪರಿಚಯಿಸಲಾಗುತ್ತದೆ.

ಕರ್ನಾಟಕ ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವ ವಿದ್ಯಾಲಯಗಳಲ್ಲಿ  ಸ್ನಾತಕ ಪದವಿಗಳ ದಾಖಲಿಗೆ ಪ್ರವೇಶ  ಬಯಸುವ ಅಭ್ಯರ್ಥಿಗಳು ಮೇ 2 ರೊಳಗೆ ಸಂಸ್ಥೆಯ ಕಛೇರಿಯಲ್ಲಿ ರೂ. 600 ನಗದು ಪಾವತಿಸಬೇಕು ಅಥವಾ 9742455666 ಮೊಬೈಲ್ ನಂಬರ್ ಗೆ ಫೋನ್ ಪೇ ಮೂಲಕ ಪಾವತಿಸಿ  ಹೆಸರು ನೊಂದಾಯಿಸಿಕೊಳ್ಳಬಹುದು.

    ಹೆಚ್ಚಿನ ಮಾಹಿತಿಗೆ ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ : 9742455666, ಖಜಾಂಚಿ : 9448656231 ಸಂಖ್ಯೆ ಗೆ ಸಂಪರ್ಕಿಸಲು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಜಿ.ಸಿ. ರಂಗಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Share This Article
error: Content is protected !!
";