ಮೌಲ್ಯವರ್ಧನೆ ಮತ್ತು ರೈತರ ಸಬಲೀಕರಣ ಎತ್ತಿ ಹಿಡಿಯಲು ನಡೆದ ಅಗ್ರಿವಾಕ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ರಾಜ್ಯ  ಕೃಷಿ ಇಲಾಖೆಯು ಕೃಷಿಯನ್ನು ಕೇವಲ ಉತ್ಪಾದನೆಗಿಂತ ಮೀರಿ ಮುನ್ನಡೆಸುವ ಮತ್ತು ರೈತರನ್ನು ಉದ್ಯಮಿಗಳಾಗಿ ಸಬಲೀಕರಣಗೊಳಿಸುವ ಅಗತ್ಯವನ್ನು ಎತ್ತಿ ತೋರಿಸಲು ಕಬ್ಬನ್ ಪಾರ್ಕ್‌ನಲ್ಲಿ  ನಡೆದ ಅಗ್ರಿವಾಕ್ನಲ್ಲಿ ವಿವಿಧ ವಯೋಮಾನದ ಸಾವಿರಾರಾರು ನಾಗರಿಕರು ಭಾಗವಹಿಸಿದ್ದರು.

ಮುಂಬರುವ ಅಂತರರಾಷ್ಟ್ರೀಯ ವ್ಯಾಪಾರ ಮೇಳ 2026 ರ ಪೂರ್ವಭಾವಿ ಕಾರ್ಯಕ್ರಮವಾಗಿ ಆಯೋಜಿಸಲಾದ ಈ ನಡಿಗೆಯನ್ನು ರೈತರ ಸಬಲೀಕರಣಕ್ಕಾಗಿ ನಡಿಗೆಎಂಬ ವಿಷಯದ ಅಡಿಯಲ್ಲಿ ನಡೆಸಲಾಯಿತು ಮತ್ತು ರೈತರ ಆದಾಯವನ್ನು ಸುಧಾರಿಸುವ ಮಾರ್ಗಗಳಾಗಿ ಮೌಲ್ಯವರ್ಧನೆ, ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿತ್ತು.

- Advertisement - 

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬೆಳಿಗ್ಗೆ ಕಬ್ಬನ್ ಪಾರ್ಕ್‌ನ ಬ್ಯಾಂಡ್‌ಸ್ಟ್ಯಾಂಡ್ ಬಳಿ ನಡಿಗೆಗೆ ಚಾಲನೆ ನೀಡಿದರು. ಬೆಳಿಗ್ಗೆ 6.00 ಗಂಟೆಗೆ ನಡಿಗೆ ಪ್ರಾರಂಭವಾಗಿ  ಕ್ವೀನ್ಸ್ ರಸ್ತೆ, ವಿಧಾನಸೌಧ, ಬಿಬಿಎಂಪಿ ಟವರ್, ಯುಬಿ ಸಿಟಿ ಸಿಗ್ನಲ್ ಮತ್ತು ವಿಠಲ್ ಮಲ್ಯ ರಸ್ತೆ ಮೂಲಕ ಹಾದುಹೋಗುವ ಮಾರ್ಗವನ್ನು ಕ್ರಮಿಸಿ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಮುಕ್ತಾಯವಾಯಿತು.

 ನಡಿಗೆಗೆ ಮುಂಚಿತವಾಗಿ ಅಭ್ಯಾಸ ಚಟುವಟಿಕೆಯಾಗಿ ಜುಂಬಾ ಡ್ಯಾನ್ಸ್  ಇದು ಕಾರ್ಯಕ್ರಮಕ್ಕೆ ಶಕ್ತಿ ಮತ್ತು ಉತ್ಸಾಹವನ್ನು ಸೇರಿಸಿತು.

- Advertisement - 

 

 

Share This Article
error: Content is protected !!
";