(ಅ)ಹಿಂದ ನಿಗಮಗಳ ಅನುದಾನ ಖೋತಾ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
(
ಅ)ಹಿಂದ ನಿಗಮಗಳ ಅನುದಾನ ಖೋತಾ; ಡೋಂಗಿ ಸಮಾಜವಾದಿಗಳ ಸಾಮಾಜಿಕ ನ್ಯಾಯ ಭಾಷಣಕ್ಕೆ ಮಾತ್ರ ಸೀಮಿತ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರೇ, ತಮ್ಮ ಸರ್ಕಾರ ಬಂದಾಗಿನಿಂದ ಕಳೆದ ಎರಡು ವರ್ಷಗಳಲ್ಲಿ ಹಿಂದುಳಿದ ಸಮುದಾಯಗಳಿಗೆ ಮಾಡಿರುವ ದೊಡ್ಡ ಉಪಕಾರದ ಬಗ್ಗೆ ಇಂದಿನ ಪತ್ರಿಕೆಗಳು ಹಾಡಿ ಹೊಗಳಿವೆ ಓದಿಕೊಳ್ಳಿ ಎಂದು ಅವರು ತಾಕೀತು ಮಾಡಿದ್ದಾರೆ.

- Advertisement - 

ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅನುದಾನದಲ್ಲಿ 90 ಕೋಟಿ ಅನುದಾನ ಕಡಿತ, ವಿಶ್ವಕರ್ಮ ನಿಗಮಕ್ಕೆ 12 ಕೋಟಿ ಅನುದಾನ ಕಡಿತ, ಉಪ್ಪಾರ ನಿಗಮಕ್ಕೆ 7 ಕೋಟಿ ಅನುದಾನ ಕಡಿತ, ಅಂಬಿಗರ ಚೌಡಯ್ಯ ನಿಗಮಕ್ಕೆ 16 ಕೋಟಿ ಕಡಿತ, ಸವಿತಾ ಸಮಾಜಕ್ಕೆ 5 ಕೋಟಿ ಅನುದಾನ ಕಡಿತ ಮಾಡುವ ಮೂಲಕ ಹಿಂದುಳಿದ ವರ್ಗಗಳ ನಿಗಮಗಳಿಗೆ ಸಿದ್ದರಾಮಯ್ಯ ದ್ರೋಹ ಎಸಗಿದ್ದಾರೆಂದು ಅಶೋಕ್ ಟೀಕಿಸಿದ್ದಾರೆ.

ಒಂದು ಕಡೆ ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳಿಗೆ ನೂರಾರು ಕೋಟಿ ಅನುದಾನ ಕಡಿತ ಮಾಡಿದ್ದೀರಿ, ಮತ್ತೊಂದು ಕಡೆ ಮೀಸಲಿಟ್ಟಿರುವ ಹಣವನ್ನು ಸರಿಯಾಗಿ ಖರ್ಚು ಮಾಡಿಲ್ಲ. ಇದೇನಾ ಸ್ವಾಮಿ ನಿಮ್ಮ ಸಾಮಾಜಿಕ ನ್ಯಾಯ? ನಾಚಿಕೆಯಾಗಬೇಕು ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ.

- Advertisement - 

ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ವಿನಿಯೋಗವಾಗಬೇಕಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣವನ್ನ ಲಪಟಾಯಿಸಿದ್ದಾಯ್ತು. SCSP/TSP ಹಣದಲ್ಲಿ ಪ್ರತಿ ವರ್ಷ ಬರೋಬ್ಬರಿ 15,000 ಕೋಟಿ ರೂಪಾಯಿ ಹಣವನ್ನ ಬೇರೆಡೆ ವರ್ಗಾಯಿಸಿ ದುರ್ಬಳಕೆ ಮಾಡಿದ್ದಾಯ್ತು. ಈಗ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ನಿಗಮಗಳ ಕಥೆ ನೋಡಿದರೆ ಪ್ರತಿ ವರ್ಷ ನೂರಾರು ಕೋಟಿ ಅನುದಾನ ಕಡಿತವಾಗಿದೆ.

ಸಿಎಂ ಸಿದ್ದರಾಮಯ್ಯ ನವರೇ, ತಾವು ಮತ್ತು ತಮ್ಮ ಪಟಾಲಂ ಇನ್ನು ಮುಂದೆ ಎಂದಿಗೂ ಸಾಮಾಜಿಕ ನ್ಯಾಯದ ಬಗ್ಗೆ ಬುರುಡೆ ಭಾಷಣ ಮಾಡಿ ಬುದ್ಧ, ಬಸವ, ಅಂಬೇಡ್ಕರರಿಗೆ ಅವಮಾನ ಮಾಡಬೇಡಿ. ದಲಿತರು, ಹಿಂದುಳಿದ ವರ್ಗಗಳ ಜನರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಮೋಸ ಮಾಡಬೇಡಿ ಎಂದು ಅಶೋಕ್ ತಾಕೀತು ಮಾಡಿದರು.

 

Share This Article
error: Content is protected !!
";