ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ, ದೋಷ ಮತ್ತು ತನಿಖೆಗೆ ಸಹಕಾರಿ

News Desk

ಚಂದ್ರವಳ್ಳಿ ನ್ಯೂಸ್, ಅಹಮದಾಬಾದ್:
ಅಹಮದಾಬಾದ್ ನಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು ಇದರಿಂದಾಗಿ ವಿಮಾನದಲ್ಲಿ ತಾಂತ್ರಿಕ ದೋಷ ಸೇರಿದಂತೆ ತನಿಖೆಗೆ ಸಹಕಾರಿ ಆಗಲಿದೆ.

- Advertisement - 

ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಏರ್ ಇಂಡಿಯಾ ವಿಮಾನ ಪತನವಾಗಿ 265 ಜನ ಮೃತಪಟ್ಟಿದ್ದರು. ಪತನಗೊಂಡ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಬ್ಲ್ಯಾಕ್ ಬಾಕ್ಸ್ ಶುಕ್ರವಾರ ಪತ್ತೆಯಾಗಿದೆ.

- Advertisement - 

ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದ ತಂಡ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಜನದಟ್ಟಣೆಯ ಮೇಘನಿನಗರ ಪ್ರದೇಶದಲ್ಲಿ ಒಂದು ಬ್ಲ್ಯಾಕ್ ಬಾಕ್ಸ್ ವಶಪಡಿಸಿಕೊಂಡಿದೆ ಎನ್ನಲಾಗಿದೆ. ಆದರೂ ಬ್ಲ್ಯಾಕ್ ಬಾಕ್ಸ್ ವಶಪಡಿಸಿಕೊಂಡಿರುವ ಬಗ್ಗೆ ವಿಮಾನಯಾನ ಸಂಸ್ಥೆ ಇನ್ನೂ ದೃಢಪಡಿಸಿಲ್ಲ.

ಬ್ಲ್ಯಾಕ್ ಬಾಕ್ಸ್ ವಿಮಾನ ಹಾರಾಟದ ಸಮಯದಲ್ಲಿ ವಿಮಾನದ ಬಗ್ಗೆ ಮಾಹಿತಿ ದಾಖಲಿಸುವ ಒಂದು ಸಣ್ಣ ಸಾಧನವಾಗಿದೆ. ಇದು ವಿಮಾನ ಅಪಘಾತಗಳ ತನಿಖೆಗೆ ಸಹಾಯ ಮಾಡುತ್ತದೆ.

- Advertisement - 

ಅಪಘಾತಕ್ಕೆ ತಾಂತ್ರಿಕ ವೈಫಲ್ಯ, ಎಂಜಿನ್ ತೊಂದರೆ ಅಥವಾ ಮಾನವ ದೋಷ ಕಾರಣವಾಗಿದೆಯೇ ಎಂದು ನಿರ್ಧರಿಸಲು ತನಿಖಾಧಿಕಾರಿಗಳು ವಿಮಾನ ಮತ್ತು ಕಾಕ್ಪಿಟ್ ಡೇಟಾವನ್ನು ಡಿಕೋಡ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮೇಘನಿನಗರದ ಬಿಜೆ ವೈದ್ಯಕೀಯ ಕಾಲೇಜಿನ ಸಂಕೀರ್ಣಕ್ಕೆ ಅಪ್ಪಳಿಸಿತ್ತು. ದುರಂತದಲ್ಲಿ 265 ಜನ ಸಾವನ್ನಪ್ಪಿದ್ದಾರೆ.

 

 

 

Share This Article
error: Content is protected !!
";