ಭೂಮಿ ಖರೀದಿ: ಆಕ್ಷೇಪಣೆ ಸಲ್ಲಿಸಲು ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಭೂಮಿ ಖರೀದಿಸಲು ತಕರಾರು ಇದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

- Advertisement - 

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಬೆಂಗಳೂರು ಅವರ ಮಂಜೂರಾತಿ ಆದೇಶ ಸಂಖ್ಯೆ:ಪಜಾಪಪಂ/ಅಅನಿ/ ಭೂಒಯೋ/ಚಿತ್ರದುರ್ಗ/2025-26 ದಿನಾಂಕ:02.06.2025ರ ಆದೇಶದಲ್ಲಿ ಕೆ.ಹೆಚ್. ಹೊನ್ನೂರು ಸ್ವಾಮಿ ಬಿನ್ ಲೇ. ಸಣ್ಣ ಹೊನ್ನೂರಪ್ಪ, ಬೊಮ್ಮಕ್ಕನಹಳ್ಳಿ ಗ್ರಾಮ, ಮೊಳಕಾಲ್ಮೂರು ತಾಲ್ಲೂಕು, ಕುರುಬ ಜನಾಂಗಕ್ಕೆ  ಸೇರಿರುವ ಇವರ ಹೆಸರಿನಲ್ಲಿ

- Advertisement - 

ಮೊಳಕಾಲ್ಮೂರು ತಾಲ್ಲೂಕು ಸ್ವಾಮಿಕೆರೆ ಗ್ರಾಮದಲ್ಲಿ ಸರ್ವೇ ನಂ:19/02 ರಲ್ಲಿ 2 ಎಕರೆ ಖುಷ್ಕಿ ಭೂಮಿಯನ್ನು ಸಣ್ಣ ರಂಗಮ್ಮ ಕೋಂ ಜೆ.ಮಹಾಂತೇಶ್, ರಾಂಪುರ ಗ್ರಾಮ, ಮೊಳಕಾಲ್ಮೂರು ತಾಲ್ಲೂಕು, ಪರಿಶಿಷ್ಟ ಜಾತಿ  (ಬುಡ್ಗ ಜಂಗಮ) ಜನಾಂಗದವರಿಗೆ ಭೂ ಒಡೆತನ ಯೋಜನೆಯಡಿ ಭೂಮಿ ಖರೀದಿಸಿ ನೀಡಲು ಆದೇಶ ಹೊರಡಿಸಲಾಗಿದ್ದು, ಅದರಂತೆ, ಈ ಸರ್ವೇ ನಂಬರ್ ಭೂಮಿಗೆ ಸಂಬಂಧಿಸಿದಂತೆ ಯಾವುದಾದರು ತಂಟೆ ತಕರಾರು ಇದ್ದಲ್ಲಿ 7 ದಿನಗಳೊಳಗಾಗಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗರವರ ಕಾರ್ಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

 ನಿಗಧಿಪಡಿಸಲಾದ ದಿನಾಂಕದೊಳಗೆ ಆಕ್ಷೇಪಣೆಯನ್ನು ಸಲ್ಲಿಸದಿದ್ದಲ್ಲಿ, ಯಾವುದೇ ಆಕ್ಷೇಪಣೆ ಇಲ್ಲವೆಂದು ಭಾವಿಸಿ ಭೂಮಿಯನ್ನು ಖರೀದಿಸಿ ಫಲಾನುಭವಿಗೆ ನೊಂದಣಿ ಮಾಡಿಸಲು ಕ್ರಮ ವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

 

 

 

Share This Article
error: Content is protected !!
";