ಫಲಪುಷ್ಪ ಪ್ರದರ್ಶನದಲ್ಲಿ ಗಿಡಗಳ ಪ್ರದರ್ಶನಕ್ಕೆ ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲಾ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಜನವರಿ ೨೬ ರಿಂದ ೨೮ರವರೆಗೆ ೩ ದಿನಗಳ ಕಾಲ ಆಯೋಜಿಸಲಾಗಿರುವ ಫಲಪುಷ್ಪ
ಪ್ರದರ್ಶನದಲ್ಲಿ ತುಮಕೂರು ನಗರದ ಹವ್ಯಾಸಿ ನಾಗರಿಕರು ತಾವು ಬೆಳೆದಿರುವ ಆಕರ್ಷಕ ಆರ್ಕಿಡ್, ಬೋನ್ಸಾಯ್ ಗಿಡ, ಕ್ಯಾಕ್ಟಸ್ ಮತ್ತು ಸಕ್ಯೂಲೆಂಟ್ಸ್ ಗಿಡಗಳನ್ನು ಪ್ರತ್ಯೇಕವಾಗಿ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

        ಗಿಡಗಳ ಸುರಕ್ಷತೆ ತೋಟಗಾರಿಕೆ ಇಲಾಖೆಯ ಹೊಣೆಯಾಗಿದ್ದು, ಆಸಕ್ತಿಯುಳ್ಳವರು ಜನವರಿ ೨೩ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

        ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೯೭೪೧೯೨೮೯೬೬ನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕಿ ಶಾರದಮ್ಮ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";