ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯನಗರ):
ಬಂಗಾರದ ಬೆಲೆ 5 ಸಾವಿರದಿಂದ 90 ಸಾವಿರಕ್ಕೆ ಏರುತ್ತಿರುವ ಸಮಯದಲ್ಲಿ, ಮಹಿಳೆಯರು ಸೌಂದರ್ಯ ಆಭರಣ ಗಳನ್ನು ಖರೀದಿಸಲು ಅಸಾಧ್ಯವಾದ ಮಾತಾಗಿದೆ. ಬಂಗಾರದಂತೆ ಕಾಣುವ ಇಂತಹ ಆಭರಣ ಗಳನ್ನು ಧರಿಸಿ, ಮಹಿಳೆಯರು ತಮ್ಮ ಅಭಿಲಾಷೆ ತೀರಿಸಿ ಕೊಳ್ಳಲು, ಇಂತಹ ಆಭರಣಗಳ ಅವಶ್ಯಕತೆ ಇದೇ ಎಂದು ವಿಜಯನಗರ ಶಾಸಕ ಗವಿಯಪ್ಪ ಹೇಳಿದರು.
ಅವರು ಭಾನುವಾರ ಕಾಲೇಜ್ ರಸ್ತೆಯಲ್ಲಿ ನೂತನವಾಗಿ “ಕುಶಾಲ್ಸ್” ಎಂಬ ಕೃತಕ ಒಡವೆ ಆಭರಣಗಳ ಶೋ ರೂಂ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ನೈರುತ್ಯ ರೈಲ್ವೆಯ ಜಡ್ಆರ್ ಯುಸಿಸಿ ಬಾಬುಲಾಲ್ ಜಿ. ಜೈನ್ ಮಾತನಾಡಿ ನನ್ನ ಗ್ರಾಮದ ಸ್ನೇಹಿತ ರಾಷ್ಟ್ರಾದ್ಯಂತ 97 ಶಾಖೆಗಳನ್ನು ತೆರೆದು ವ್ಯಾಪಾರದಲ್ಲಿ ಪ್ರಗತಿ ಸಾಧಿಸಿರುವುದು ಸಂತೋಷದ ವಿಷಯ, ಉತ್ತಮ ವಹಿವಾಟು ನಡೆದು ಪ್ರಗತಿ ಯಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.
ಸೇರಿದಂತೆ ಜೈನ್ ಈ ಮಳಿಗೆಯ ಉದ್ಘಾಟನೆಯಲ್ಲಿ ಬಲ್ದೋಟ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಡಾ.ನರೇಂದ್ರ ಕುಮಾರ್ ಎ. ಬಲ್ದೋಟ ದಂಪತಿಗಳು, ಸಮಾಜದ ಹಾಗೂ ನಗರದ ಮುಖಂಡರುಗಳು “ಕುಶಲ್ಸ್” ಆಭರಣ ಅಂಗಡಿಯ ಪಾಲ್ಗೊಂಡರು.