ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರದಲ್ಲಿ ನಾನಾ ..? ನೀನಾ..? ಕೋಲ್ಡ್‌ವಾರ್‌ಜೋರಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಮುಡಾ ಪ್ರಕರಣದ A1 ಆರೋಪಿ ಭ್ರಷ್ಟ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಬಣ ರಾಜಕೀಯ ಮುಂದುವರಿಸಿದ್ದಾರೆ. ಆದರೆ ಅಧಿಕಾರ ಹಂಚಿಕೆ ಆಧಾರದ ಮೇಲೆ ಕುರ್ಚಿಗೆ ಏರಲು ಡಿ.ಕೆ ಶಿವಕುಮಾರ್ ಹವಣಿಸುತ್ತಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
ರಾಜ್ಯದ ಅಭಿವೃದ್ಧಿಯನ್ನು ಪಾತಳಕ್ಕೆ ತಳ್ಳಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ಸಿಗರು ಜನಕಲ್ಯಾಣ ಮರೆತು ಅಧಿಕಾರಕ್ಕಾಗಿ ಸ್ವಾರ್ಥ ರಾಜಕಾರಣದಲ್ಲೇ ಮುಳುಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದೆ.