ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದಿದ್ದರೆ ಕ್ರಮ-ಅಮರೇಶ್ ಗೌಡ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವ ಸ್ಥಳಗಳಿಗೆ ನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್
  ಅಮರೇಶ್ ಗೌಡ ಹಾಗೂ ಪಿಡಬ್ಲ್ಯೂಡಿ    ಕಾರ್ಯಪಾಲಕ ಇಂಜಿನಿಯರ್  ಪುರುಷೋತ್ತಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಗರಕೆರೆ ರಸ್ತೆ, ಶಾಂತಿನಗರ ರಸ್ತೆ, ಒಕ್ಕಲಿಗರ ಭವನ ಮುಂಭಾಗ, ಎಪಿಎಂಸಿ ಯಾರ್ಡ್ ಮುಖ್ಯದ್ವಾರದ ಮುಂದೆ ಮತ್ತು ಸರ್ಕಾರಿ ಆಸ್ಪತ್ರೆ ಮುಂಭಾಗದ ರಸ್ತೆಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದ್ದು, ಈ ಸ್ಥಳಗಳನ್ನು ಆಕ್ಸಿಡೆಂಟ್ ಝೋನ್ ಎಂದು ಪರಿಗಣಿಸಿ ಈ‌ಸ್ಥಳಗಳಲ್ಲಿ ಹಂಪ್, ಸೂಚನಾ ಫಲಕಗಳು ಸೇರಿದಂತೆ ಇತರೆ ಸಂಚಾರ ಸೂಚನಾ ಫಲಗಳನ್ನು ಅಳವಡಿಸಲು ನಿರ್ಧರಿಸಿದ್ದು.

 ನಗರದಲ್ಲಿ ವಾಹನ ಚಲಾಯಿಸುವವರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು, ಮನಸೋಇಚ್ಛೆ ತಮಗೆ ಇಷ್ಟ ಬಂದ ಕಡೆ ವಾಹನ ತಿರುಗಿಸುವುದು, ತಪ್ಪು ದಾರಿಯಲ್ಲಿ ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವುದು, ಸೀಟ್ ಬೆಲ್ಟ್ ಇಲ್ಲದೇ ಕಾರು ಚಲಾಯಿಸುವುದು, ತ್ರಿಬಲ್ ರೈಡಿಂಗ್, ಅಪ್ರಾಪ್ತ ವಯಸ್ಕರು ವಾಹನ ಓಡಿಸುವುದು,

ಡಿಎಲ್, ಎಲ್ ಎಲ್ ಇಲ್ಲದೇ ಬೈಕ್, ಕಾರು ಸೇರಿದಂತೆ ಇತರೆ ವಾಹನಗಳನ್ನು ಓಡಿಸುವುದು ಸೇರಿದಂತೆ ಇತರೆ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸಿದರೆ ಕಡ್ಡಾಯವಾಗಿ ದಂಡ, ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

 

- Advertisement -  - Advertisement - 
Share This Article
error: Content is protected !!
";