ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್‌ಮಲ್ಲಿಕಾರ್ಜುನ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.
ತೋಟಗಾರಿಕೆ ಇಲಾಖೆಯು ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಕೃತಿಗಳ ಕುರಿತಾದ “ತೇಜಸ್ವಿ ವಿಸ್ಮಯ” ಥೀಮ್ಅಡಿ ಇಂದಿನಿಂದ ಜನವರಿ 26ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಿದೆ.
ಲಾಲ್‌ಬಾಗ್‌ನಲ್ಲಿ ತೇಜಸ್ವಿಯವರ ಪ್ರಕೃತಿ ವಿಸ್ಮಯವೇ ಅನಾವರಣಗೊಂಡಿದೆ. ಕರ್ವಾಲೋ ಕಾದಂಬರಿ ಕಾಲ್ಪನಿಕ ಚಿತ್ರಣ, ಬಿಳಿಗಿರಿ ರಂಗನ ಬೆಟ್ಟದ ಹಳ್ಳಿ ಸೊಗಡು, ಜಾನಪದ, ಡೊಳ್ಳು ಕುಣಿತ, ನಂದಿಗಿರಿಧಾಮ, ನಾರುಬೇರಿನ ಪ್ರದರ್ಶನ ಇರಲಿದ್ದು, ಎಲ್ಲರೂ ಈ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.

