ಹಳ್ಳಿಕಾರ್ ತಳಿ ಅಪಪ್ರಚಾರ ವರ್ತೂರ್ ಸಂತೋಷ್ ವಿರುದ್ಧ ಅಂಬರೀಷ್ ಆಕ್ರೋಶ    

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದಲ್ಲಿ
  ಹಳ್ಳಿಕಾರ್ ತಳಿ ಹಸುಗಳನ್ನು ಕುರಿತಂತೆ  ಅಪಪ್ರಚಾರ ಮಾಡಲಾಗುತ್ತಿದೆ, ಯಾವುದೇ ಅಧಿಕೃತ ಆಧಾರಗಳಿಲ್ಲದೆ  ಸುಳಿಗಳ ಹೆಸರಿನಲ್ಲಿ   ಹಳ್ಳಿಕರ್ ತಳಿಗಳನ್ನು ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿ  ಹಳ್ಳಿ ರೈತ ಅಂಬರೀಶ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು .

- Advertisement - 

  ಸಾಮಾಜಿಕ ಜಾಲತಾಣದಲ್ಲಿ  ಬಿಗ್ ಬಾಸ್ ಸ್ಪರ್ದಿ ವರ್ತುರ್ ಸಂತೋಷ್ ರವರು ಹಳ್ಳಿಕಾರ್ ಹಸುಗಳನ್ನು ಕುರಿತಂತೆ  ಕೆಲ ಸುಳಿಗಳ ಬಗ್ಗೆ   ಮಾತನಾಡಿದ್ದಾರೆ, ಈ ವಿಡಿಯೋಗಳಿಂದ  ಹಳ್ಳಿಕಾರ್  ತಳಿ ಹಸುಗಳನ್ನು  ಖರೀದಿ ಮಾಡುವ ಹಾಗೂ ಮಾರಾಟ ಮಾಡುವ ರೈತರಿಗೆ ನಷ್ಟ ಉಂಟಾಗುತ್ತದೆ.  ಹಳ್ಳಿ ರೈತರಿಗೆ ನ್ಯಾಯ ದೊರಕಿಸಬೇಕೆಂದು  ಆಕ್ರೋಶ ವ್ಯಕ್ತಪಡಿಸಿದರು.

- Advertisement - 

  ಬಿಗ್ ಬಾಸ್ ಸ್ಪರ್ಧಿ ವರ್ತುರ್ ಸಂತೋಷ್ ಅವರನ್ನು  ಬೆಂಬಲಿಸಿ ಪ್ರಶಾಂತ್ ಸಾಂಬರಗಿ ಹಾಗೂ ಪುನೀತ್ ಕೆರೆಹಳ್ಳಿ  ಮಾತನಾಡಿದ್ದಾರೆ. ನಿಜವಾದ ರೈತಪರ  ನಿಲುವಲು ಅವರು ತೆಗೆದುಕೊಳ್ಳಬೇಕಿದೆ. ಈ ರೀತಿ ಹಳ್ಳಿಕಾರ್ ತಳಿ ಹಸುಗಳ ಬಗ್ಗೆ ಅಪಪ್ರಚಾರ ಸಲ್ಲದು, ವರ್ತೂರ್ ಸಂತೋಷ್ ರವರನ್ನು  ಗೋ ರಕ್ಷಕ ಎಂದು ಬಿಂಬಿಸಿರುವ ಪ್ರಶಾಂತ್ ಸಾಂಬರಗಿ ಹಾಗೂ ಪುನೀತ್ ಕೆರೆಹಳ್ಳಿ ಈ ಕೂಡಲೇ  ಹಳ್ಳಿ ರೈತರ ಪರ ಧ್ವನಿ ಆಗಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ  ಹಳ್ಳಿಕಾರ್ ತಳಿಗಳನ್ನು ಕುರಿತ ಅಪಪ್ರಚಾರದ ವಿಡಿಯೋಗಳನ್ನು  ಡಿಲೀಟ್ ಮಾಡಿಸುವ ಕೆಲಸ ಆಗಬೇಕಿದೆ  ಎಂದರು.

  ಈ ಕುರಿತು ಸಂಬಂದಿಸಿದ ಇಲಾಖೆಗೂ ದೂರು ನೀಡಿದ್ದು , ಈ ರೀತಿಯ ಹೇಳಿಕೆಗಳು ಸರಿಯಲ್ಲ ಎಂದು ಹಳ್ಳಿ ರೈತ ಅಂಬರೀಷ್ ತಿಳಿಸಿದರು.

- Advertisement - 

 

 

Share This Article
error: Content is protected !!
";