ಅನಿಷ್ಟಗಳ ಶಿಕ್ಷಿಸಲು ಶಿಕ್ಷಣವೆಂಬ ಭೀಮಾಸ್ತ್ರ ನೀಡಿದ ಅಂಬೇಡ್ಕರ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಅಂಬೇಡ್ಕರ್ ಅವರ ಜಯಂತಿ
ಭಾರತದ ಭಾಗ್ಯ ವಿಧಾತ..

 ಅನಿಕೇತನರ ಮಹಾಚೇತನ
ನಿಮ್ಮ ಅಚಲ ಸ್ವಾಭಿಮಾನವೇ
ನಮ್ಮೆಲ್ಲರ ಬದುಕಿನ ಸಾಧನೆ..

- Advertisement - 

 ಅನಿಷ್ಟಗಳ ಶಿಕ್ಷಿಸಲು
ಶಿಕ್ಷಣವೆಂಬ ಭೀಮಾಸ್ತ್ರವನ್ನು
ಬಡವರ ಕೈಗಿಟ್ಟ ಬಲ ಭೀಮ..

 ನೊಂದು ಬೆಂದು ಬಂದವರಿಗೆ
ಕರಿಕೋಟು ತೊಟ್ಟು ನ್ಯಾಯವನ್ನು ಒದಗಿಸಿದ
ಧ್ವನಿ ಇಲ್ಲದವರಿಗೆ ದ್ವನಿಯಾದ ಪುಣ್ಯಾತ್ಮ..

- Advertisement - 

 ಮಾತೃತ್ವದ ಹೆರಿಗೆಯ ರಜೆಗಾಗಿ ಮಹಿಳೆಯರ ಹಕ್ಕುಗಳಿಗಾಗಿ
ಹೋರಾಡಿದ ಮಹಾನ್ ರಕ್ಷಕ …
ಜಾತಿ ಮತಗಳ ಕೊಳೆ ತೊಳೆಯಲು ತೊಡೆತಟ್ಟಿ ನಿಂತಹ ಮಹಾನಾಯಕ..
 

 ಸಮಾನತೆಗಾಗಿ ಹೋರಾಡಿದ
ಸ ಹೃದಯದ ಸಾಹುಕಾರ..
ಮೊದಲಿರಲಿ ಕೊನೆಯಿರಲಿ
ನಾವೆಲ್ಲರೂ ಭಾರತೀಯರಂದ ಹಮ್ಮೀರ…

 ಭಾರತದ ಭಾಗ್ಯ ವಿಧಾತ ನೀವೊಬ್ಬರೇ
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್..
ಎಂದೆಂದಿಗೂ ನೀವು ಅಜರಾಮರು….
ಕವಿತೆ
: ಅಮೃತಾ ಸಿದ್ದಪಾ ಚೌಧರಿ, ವಿಜಯಪುರ.

Share This Article
error: Content is protected !!
";