ಅಮಿತ್ ಶಾ-ಅಶೋಕ್ ಭೇಟಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರು ಹಾಗು ಹಿರಿಯ ನಾಯಕರಾದ  ಅಮಿತ್ ಶಾ ಅವರನ್ನು ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ಮಾಡಿ ಚರ್ಚಿಸಿದರು. ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಗೃಹ ಸಚಿವರಾಗಿ ದಾಖಲೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಿ
, ಭಯೋತ್ಪಾದನೆ ನಿಗ್ರಹ, ನಕ್ಸಲಿಸಂ ನಿರ್ಮೂಲನೆ,

ಆರ್ಟಿಕಲ್ 370 ರದ್ದು, ಹೊಸ ಅಪರಾಧ ಕಾನೂನುಗಳು ಹೀಗೆ ಅನೇಕ ಐತಿಹಾಸಿಕ ಮತ್ತು ದಿಟ್ಟ ನಿರ್ಧಾರಗಳ ಮೂಲಕ ಭಾರತದ ಅಂತರಿಕ ಸುರಕ್ಷತೆಯನ್ನು  ಬಲಪಡಿಸುತ್ತಿರುವ ಅವರ ಕಾರ್ಯವೈಖರಿ ಅತ್ಯಂತ ಶ್ಲಾಘನೀಯ ಎಂದು ಕರ್ನಾಟಕದ ಜನತೆಯ ಪರವಾಗಿ ಅಶೋಕ್ ಅವರು ಅಭಿನಂದನೆ ಸಲ್ಲಿಸಿದರು.

- Advertisement - 

ಇದೇ ಸಂದರ್ಭದಲ್ಲಿ ಕರ್ನಾಟಕದ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ನಡೆಸುತ್ತಿರುವ ನಿರಂತರ ಹೋರಾಟದ ಬಗ್ಗೆ ಮಾಹಿತಿ ಹಂಚಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಹಾಗೂ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಿ, ಕನ್ನಡಿಗರಿಗೆ ಒಂದು ಸುಭದ್ರ ಸರ್ಕಾರ ಹಾಗೂ ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ಕರ್ನಾಟಕ ಬಿಜೆಪಿ ತನ್ನ ಹೋರಾಟ ಮುಂದುವರಿಸಲಿದೆ ಎಂದು ಅಮಿತ್ ಶಾ ಅವರಿಗೆ ಅಶೋಕ್ ಭರವಸೆ ನೀಡಿದರು.

- Advertisement - 

 

Share This Article
error: Content is protected !!
";