ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರದ ಗೃಹ ಸಚಿವರಾಗಿ 2,258 ದಿನಗಳನ್ನು ಸಮರ್ಥವಾಗಿ ಪೂರೈಸಿ ಹೊಸ ದಾಖಲೆ ಸೃಷ್ಟಿಸಿ ಮುನ್ನೆಡೆದಿರುವ ಅಮಿತ್ ಶಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರ ದಿಟ್ಟ ನಿಲುವುಗಳು ದೇಶದ ದಿಕ್ಕು ಬದಲಿಸಿದ ದಾಖಲೆಯ ಪಥಗಳು, ಜಮ್ಮು ಮತ್ತು ಕಾಶ್ಮೀರದ 370 ವಿಧಿ ರದ್ದು, CAAಗೆ ಮತ್ತು NRC ಜಾರಿ, ಕಾಶ್ಮೀರದ ಪ್ರತ್ಯೇಕವಾದಿ ಹರಿಯತ್ ಸಂಘಟನೆಯ ನಿಷೇಧ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ರಕ್ಷಣಾ ಸಂಹಿತೆ, ಭಾರತೀಯ ಸಾಕ್ಷ್ಯಾ ಕಾಯ್ದೆ, ನಕ್ಸಲ್ ನಿಗ್ರಹ ಕ್ರಮಗಳು,
ಕೋವಿಡ್ –19 ಯಶಸ್ವಿ ನಿರ್ವಹಣೆ, ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ, ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಸರಿದಾರಿಗೆ ತರಲು ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟು ದೇಶವೇ ಹೆಮ್ಮೆಪಡುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭವಿಷ್ಯದ ಬಲಿಷ್ಠ ಭಾರತವನ್ನು ಗಟ್ಟಿಗೊಳಿಸಲು ಅಮಿತ್ ಶಾ ಅವರಿಂದ ಇನ್ನಷ್ಟು ಚಾರಿತ್ರಿಕ ಸುಧಾರಣಾ ಕೊಡುಗೆಗಳ ನಿರೀಕ್ಷೆ ರಾಷ್ಟ್ರ ಭಕ್ತರದ್ದಾಗಿದೆ. ಭಾರತ ಮಾತೆ ಹೆಮ್ಮೆಯ ಸುಪುತ್ರನಿಗೆ ಸರ್ವ ಶಕ್ತಿ ದೊರಕಿಸಿಕೊಡಲೆಂದು ವಿಜಯೇಂದ್ರ ಪ್ರಾರ್ಥಿಸಿದ್ದಾರೆ.

