ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರದೇಶ ಸಮಾಚಾರ ಓದುತ್ತಿರುವವರು ನಾಗಮಣಿ ಎಸ್ ರಾವ್…. ಎನ್ನುವ ಧ್ವನಿ ಒಂದು ಕಾಲಘಟ್ಟದಲ್ಲಿ ಜನಪ್ರಿಯ, ಇಂದಿಗೂ ಚಿರಪರಿಚಿತ. ನಾಗಮಣಿ ಅವರು 1961-62ರಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಲ್ಲಿಸಿದ್ದರು.
ಕೆ ಜಿ ರಸ್ತೆಯಲ್ಲಿ ಕಲ್ಲಿನ ಕಟ್ಟಡದಲ್ಲಿದ್ದ ಕೆಯುಡಬ್ಲೂಜೆಗೆ ಅಂದು ಇಂದಿರಾಗಾಂಧಿ ಭೇಟಿ ನೀಡಿದಾಗ ಹಾರ ಹಾಕಿ ಸ್ವಾಗತಿಸಿದ್ದು ಇದೇ ನಾಗಮಣಿ ಎಸ್ ರಾವ್ ಅವರು ಎನ್ನುವುದು ಅಭಿಮಾನದ ಸಂಗತಿ. ಕೆಯುಬ್ಲೂಜೆಯ ಮನೆಯಂಗಳದಲ್ಲಿ… ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಗಿತ್ತು.
ಬಿಎಂಶ್ರೀ ಪ್ರತಿಷ್ಠಾನದಲ್ಲಿ ಏರ್ಪಡಿಸಿದ್ದ ಅವರದ್ದೇ ಆತ್ಮಕಥನ ಕೃತಿ ಬಿಡುಗಡೆ ಸಮಾರಂಭದಲ್ಲಿ ನಾಗಮಣಿ ಎಸ್ ರಾವ್ ಅವರನ್ನು ಕೆಯುಡಬ್ಲೂಜೆ ವತಿಯಿಂದ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಅಭಿನಂದಿಸಿ, ಅಮೃತ ಬೀಜ ಪುಸ್ತಕವನ್ನು ನೀಡಿದರು. ಕೆಯುಡಬ್ಲೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಸಮಿತಿಯ ದೇವರಾಜು ಮತ್ತಿತರರು ಇದ್ದರು.
ಮಾಧ್ಯಮ ಅಕಾಡೆಮಿಯಿಂದ ಸನ್ಮಾನ:
ಇದೇ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ವತಿಯಿಂದ ಅಕಾಡೆಮಿ ಅಧ್ಯಕ್ಷೆ ಆಯೇಷಖಾನಂ ಅವರು ನಾಗಮಣಿ ಎಸ್ ರಾವ್ ಅವರನ್ನು ಸನ್ಮಾನಿಸಿದರು. ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಎಸ್.ಕೆ.ಶೇಷಚಂದ್ರಿಕಾ, ಕೆ.ಎಸ್.ರಾಜನ್, ಡಾ.ವಿಜಯಮ್ಮ, ಮಾಲತಿ ಭಟ್, ಸುಮತಿ, ಶಶಿಕಲಾ ಮತ್ತಿತರರು ಇದ್ದರು.