ಅನಾಮಧೇಯ ವ್ಯಕ್ತಿ ಮೃತ : ಗುರುತು ಪತ್ತೆಗೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಸಂಚಾರಿ ಪೋಲಿಸ್ ಠಾಣೆ ಮುಂಭಾಗದಲ್ಲಿ ಜುಲೈ 18 ರಂದು ಫುಟ್‍ಬಾತ್ ಮೇಲೆ ನಿತ್ರಾಣ ಸ್ಥಿತಿಯಲ್ಲಿ ಮಲಗಿದ್ದ ಅನಾಮಧೇಯ ವ್ಯಕ್ತಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಈ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ, ಜಿಲ್ಲಾ ಆಸ್ಪತ್ರೆಯಲ್ಲಿ ಜುಲೈ 31 ರಾತ್ರಿ 9 ಗಂಟೆ 10 ನಿಮಿಷಕ್ಕೆ ಮೃತಪಟ್ಟಿರುತ್ತಾನೆ. ಅನಾಮಧೇಯ ಮೃತ ವ್ಯಕ್ತಿ ಸುಮಾರು 70-75 ವರ್ಷ ಪ್ರಾಯದವರಾಗಿದ್ದು, 5.5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಮೂರು ಇಂಚು ಬಿಳಿ ಕೂದಲು, ಬಿಳಿ ಗಡ್ಡ-ಮೀಸೆ ಹೊಂದಿರುತ್ತಾನೆ.

- Advertisement - 

ವ್ಯಕ್ತಿಯ ಗುರುತು ಪತ್ತೆಯಾದವರು ಕೋಟೆ ಪೊಲೀಸ್ ನಿರೀಕ್ಷಕರು ಕಚೇರಿ ದೂರವಾಣಿ ಸಂಖ್ಯೆ 08194-222933, ಮೊಬೈಲ್ ಸಂಖ್ಯೆ 9480803145, ಪೊಲೀಸ್ ಉಪಾಧಿಕ್ಷಕರು ಕಚೇರಿ ದೂರವಾಣಿ ಸಂಖ್ಯೆ 08194-222430,

ಮೊಬೈಲ್ ಸಂಖ್ಯೆ 9480803120, ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194-222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

- Advertisement - 

Share This Article
error: Content is protected !!
";