ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಮಾರು 35-40 ವರ್ಷದ ಅನಾಮಧೇಯ ವ್ಯಕ್ತಿ ಮೃತಪಟ್ಟಿದ್ದು, ಈ ಕುರಿತು ಜ.09 ರಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.6 ರಂದು ಹೊಳಲ್ಕೆರೆ ಸರ್ಕಾರಿ ಅಸ್ಪತ್ರೆಗೆ ಒಬ್ಬ ಅನಾಮಧೇಯ ವ್ಯಕ್ತಿ ಅನಾರೋಗ್ಯದಿಂದ ಒಳ ರೋಗಿಯಾಗಿ ದಾಖಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.8 ರಂದು ವ್ಯಕ್ತಿ ಮೃತಪಟ್ಟಿರುತ್ತಾರೆ.
ಮೃತ ವ್ಯಕ್ತಿ 5.6 ಅಡಿ ಎತ್ತರದ್ದು, ಸಣಕಲ್ಲು ಮೈ ಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈ ಬಣ್ಣ ಹೊಂದಿರುತ್ತಾನೆ. ಮೃತನ ಬಲಗೈಯಲ್ಲಿ SASD ಎಂಬ ಇಂಗ್ಲೀಷ್ ಅಕ್ಷರದ ಹಚ್ಚೆ ಗುರುತು ಇದೆ. ಶವದ ಮೈ ಮೇಲೆ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇದೆ.
ಗುರುತು ಪತ್ತೆಯಾದವರು ಹೊಳಲ್ಕೆರೆ ಪೊಲೀಸ್ ಠಾಣೆ ಸಂಖ್ಯೆ 08191-275233, 9480803151 ಹೊಳಲ್ಕೆರೆ ವೃತ್ತ ನಿರೀಕ್ಷಕರ ಕಛೇರಿ ಸಂಖ್ಯೆ 08191-275376, 9480803135 ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರ ಕಛೇರಿ ಸಂಖ್ಯೆ 08194-2224304 ಚಿತ್ರದುರ್ಗ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

