ಬೆಂಗಳೂರು ಪೂರ್ವ ಭಾಗದಲ್ಲಿ ಭವ್ಯ ಹಸಿರು ತಾಣ: ಬೈಯಪ್ಪನಹಳ್ಳಿ ಎನ್ ಜಿಇಎಫ್ ನ65 ಎಕರೆ ಪ್ರದೇಶದಲ್ಲಿ ವೃಕ್ಷೋದ್ಯಾನ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾರ್ಚ್ ತಿಂಗಳಲ್ಲಿ ಮೊದಲ ಹಂತ ಸಾರ್ವಜನಿಕರಿಗೆ ಮುಕ್ತ
ಈ ದಿನ ಬೈಯಪ್ಪನಹಳ್ಳಿಯಲ್ಲಿರುವ ಎನ್ ಜಿಇಎಫ್
ಆವರಣಕ್ಕೆ ಭೇಟಿನೀಡಿ ವೃಕ್ಷೋದ್ಯಾನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಕಾರ್ಖಾನೆಗೆ ಸೇರಿದ ಒಟ್ಟು 119 ಎಕರೆ ಜಾಗದ ಪೈಕಿ 65 ಎಕರೆ ಪ್ರದೇಶದಲ್ಲಿ ವಿಶಾಲ ಹಾಗೂ ಆಕರ್ಷಕ ವೃಕ್ಷೋದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮೊದಲ ಹಂತವನ್ನು ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಳಿಸುವ ಉದ್ದೇಶವಿದೆ.

- Advertisement - 

ವೃಕ್ಷೋದ್ಯಾನವನ್ನು ಹಂತ-1, 1ಎ, 1ಬಿ ಹಾಗೂ ಹಂತ-2 ಎಂದು ನಾಲ್ಕು ಹಂತಗಳಲ್ಲಿ, ಸುಮಾರು ರೂ. 37.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಹಂತ1ಎಯ ಕಾಮಗಾರಿ ಮುಂದಿನ 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ.
ಈ ಆವರಣದಲ್ಲಿ ಈಗಾಗಲೇ ಸುಮಾರು 8,500 ಬಗೆಯ ಮರಗಳಿದ್ದು
, ಒಂದೇ ಒಂದು ಮರವನ್ನು ಸಹ ಕಡಿದು ಹಾಕದೆ, ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುವ ರೀತಿಯಲ್ಲಿ ವೃಕ್ಷೋದ್ಯಾನವನ್ನು ರೂಪಿಸಲಾಗುತ್ತಿದೆ.
ಎನ್ ಜಿಇಎಫ್
ಆವರಣದಲ್ಲಿರುವ ಕಚೇರಿ ಕಟ್ಟಡಗಳು ಸುರಕ್ಷಿತವಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ)ಯ ವಿಜ್ಞಾನಿಗಳು ಪರಿಶೀಲಿಸಿ ದೃಢಪಡಿಸಿದ್ದಾರೆ. ಈ ಕಟ್ಟಡಗಳಿಗೆ ನವೀಕೃತ ರೂಪ ನೀಡಿ, ಹೊಸ ಅಗತ್ಯಗಳಿಗೆ ಅನುಗುಣವಾಗಿ ಬಳಕೆ ಮಾಡಲಾಗುವುದು ಎಂದು ಸಚಿವ ಪಾಟೀಲ್ ತಿಳಿಸಿದರು.

- Advertisement - 

ಕಾರ್ಖಾನೆಗೆ ಸೇರಿದ ಕಾಂಪೌಂಡಿನ ಹೊರಗಿನ 4.5 ಎಕರೆ ಜಾಗದಲ್ಲಿ, 5,000 ರಿಂದ 7,000 ವಾಹನಗಳ ನಿಲುಗಡೆಗೆ ಅನುಕೂಲವಾಗುವ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗುವುದು.
ಈಗಿರುವ ಎರಡು ಎಲೆಕ್ಟ್ರಿಕ್ ಮೋಟಾರ್ ಶೆಡ್ ಗಳಲ್ಲಿ
, ತಲಾ ಕನಿಷ್ಠ 15,000 ಆಸನ ವ್ಯವಸ್ಥೆಯ ಎರಡು ಪ್ರತ್ಯೇಕ ಕನ್ವೆನ್ಶನ್ ಸೆಂಟರ್ ಗಳು ನಿರ್ಮಾಣವಾಗಲಿವೆ.

ಇಲ್ಲಿ ಸಮಾವೇಶ, ಸಮ್ಮೇಳನ, ವಿಚಾರ ಸಂಕಿರಣ, ವಾರ್ಷಿಕೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ.
 ‘ಇನ್ನೋವರ್ಸ್ಎಂಬ ಹೆಸರಿನಲ್ಲಿ ನವೋದ್ಯಮಗಳಿಗೆ ಅಗತ್ಯವಿರುವ ಪರಿಪೋಷಣಾ ಕೇಂದ್ರವನ್ನು, ಸರ್ಕಾರದ ಕೆಐಟಿಟಿಎಸ್ ಸಂಸ್ಥೆಯ ಮೂಲಕ ಸ್ಥಾಪಿಸಲಾಗುವುದು.

ಜೊತೆಗೆ ಐಟಿಬಿಟಿ ಇಲಾಖೆ ವತಿಯಿಂದ ರೂ. 100 ಕೋಟಿ ವೆಚ್ಚದಲ್ಲಿ ಟೆಕ್ನಾಲಜಿ ಇನ್ನೋವೇಶನ್ ಮ್ಯೂಸಿಯಂಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

ವೃಕ್ಷೋದ್ಯಾನದ ವಿಶೇಷತೆಗಳು:
ವೃಕ್ಷೋದ್ಯಾನದಲ್ಲಿ ಜಾಗತಿಕ ಮಟ್ಟದ ಶಿಲ್ಪಕಲಾ ಉದ್ಯಾನ
, ಎನ್ ಜಿಇಎಫ್ ವಸ್ತು ಸಂಗ್ರಹಾಲಯ ಹಾಗೂ ವೈವಿಧ್ಯಮಯ ಚಟುವಟಿಕೆಗಳಿಗೆ ಅನುಕೂಲವಾಗುವ ಸುಸಜ್ಜಿತ ಆ್ಯಂಪಿಥಿಯೇಟರ್ ನಿರ್ಮಿಸಲಾಗುವುದು.

ಈ ಆವರಣದಲ್ಲಿ ಯಾವುದೇ ರೀತಿಯ ಮಾಲ್ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದಿಲ್ಲ. ಈ ವೃಕ್ಷೋದ್ಯಾನವು ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಗೆ ಸಮಾನವಾದ, ಅದಕ್ಕಿಂತಲೂ ಉತ್ತಮ ಹಸಿರು ತಾಣವಾಗಿ ರೂಪುಗೊಳ್ಳಲಿದೆ.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್, ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ  ಡಾ. ಜೆ. ರವಿಶಂಕರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಕುಮಾರ್, ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್,

ಐಟಿಬಿಟಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳಾ ಹಾಗೂ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮೊದಲಾದವರು ಉಪಸ್ಥಿತರಿದ್ದರು.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವ ಎನ್ ಜಿಇಎಫ್ ಗೆ ಸೇರಿದ ಬೃಹತ್ ಜಾಗದಲ್ಲಿ ಅತ್ಯಾಕರ್ಷಕ ಟ್ರೀ ಪಾರ್ಕ್ ಹಾಗೂ ವಿವಿಧ ನಾಗರಿಕ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ ನಿರ್ಮಿಸುವ ಸಂಬಂಧ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದೆ.

 

Share This Article
error: Content is protected !!
";