ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೃತರ ಮನೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಹಾಗಾದರೆ, ಈ ಪ್ರಕರಣವನ್ನು ಎಸ್ಐಟಿಗೆ ಕೊಡ್ತೀರಾ? ಪ್ರಕರಣದ ಮೂಲ ಬುಡವನ್ನು ಹುಡುಕುವಕೆಲಸವಾಗ್ತಿಲ್ಲ. ಇದಕ್ಕಲ್ಲ ಕಾರಣ ಭರತ್ ರೆಡ್ಡಿ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದರು.
ಮೊನ್ನೆ ಸಿಎಂ ಏರ್ಪೋರ್ಟ್ಗೆ ಬಂದಾಗ ಭರತ್ ರೆಡ್ಡಿ ಹತ್ತಿರ ಮಾತನಾಡಿದ್ದಾರೆ. ಭರತ್ ರೆಡ್ಡಿ ಪ್ರಕರಣದ A1 ಆರೋಪಿಯಾಗಿದ್ದು ಅವರ ಜೊತೆಗೆ ಸಿಎಂ ಮಾತನಾಡ್ತಾರೆ. ಡಿಕೆ ಶಿವಕುಮಾರ್ ಕೂಡ ಭರತ್ ರೆಡ್ಡಿ ಬೆಂಬಲಕ್ಕೆ ನಿಂತಿದ್ದಾರೆ ಈ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಕೂಡ ನಡೆಸಬಹುದು ಎಂಬ ಅನುಮಾನ ಮೂಡುತ್ತಿದೆ ಎಂದು ಶ್ರೀರಾಮುಲು ಕಿಡಿಕಾರಿದರು.
ಮೃತ ರಾಜಶೇಖರನ ಕುಟುಂಬಕ್ಕೆ ಯಾವ ನ್ಯಾಯ ಕೊಡ್ತಾರೆ ಅನ್ನೋ ಬಗ್ಗೆ ಕಾದು ನೋಡ್ತೇನೆ. ಯಾವುದನ್ನು ಸಮರ್ಥನೆ ಮಾಡಿಕೊಳ್ಳಲ್ಲ. ಭರತ್ ರೆಡ್ಡಿ ಕಡೆಯವರು ಸತ್ಯವಂತರೇ? ಅವರು ಜನಾರ್ದನ ರೆಡ್ಡಿ ಮನೆಗೆ ಸಾವಿರಾರು ಗೂಂಡಾಗಳನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದಾಗ ನಾವು ಸುಮ್ಮನೆ ಕೂರಬೇಕೇ? ಅವರು ಹೊಡೆದ್ರೇ ನಾವು ಕೈಕೊಟ್ಟಿ ಕುಳಿತುಕೊಳ್ಳಬೇಕೇ? ದಾಳಿಯಾದಾಗ ಪ್ರತಿದಾಳಿಯಾಗಿದೆ.
ನೂಕು ನುಗ್ಗಲು ಆದಾಗ ಎರಡು ಕಡೆ ದಾಳಿಯಾಗಿರಬಹುದು. ಆವೇಶದಲ್ಲಿ ಕಟ್ಟಿಗೆ, ಕಾರದ ಪುಡಿ ತಂದಿರಬಹುದು. ಜನಾರ್ದನ ರೆಡ್ಡಿ ಪಕ್ಕದಲ್ಲೇ ಗುಂಡು ಹಾರಿದೆ. ಜನಾರ್ದನ ರೆಡ್ಡಿ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಕಣ್ಣೆದುರು ನಾನು ನೋಡಿದಾಗ ಗೋಲಿ ಹೊಡೆದ್ರು.
ಶ್ರೀರಾಮುಲುಗೆ ಗೋಲಿ ತಗುಲಿದೆ ಎಂದು ಜನರು ಓಡೋಡಿ ಬಂದ್ರು. ಇದು ಸಡನ್ ಅಗಿ ನಡೆದ ಘಟನೆ. ಇಬ್ಬರ ಪಾತ್ರ ಇರೋದಕ್ಕೆ ಎರೆಡು ಕಡೆ ಬಂಧನವಾಗಿದೆ. ನಾನು ಬೇಲ್ ಕೂಡ ತೆಗೆದುಕೊಳ್ಳಲ್ಲ. ತಪ್ಪಿದ್ದರೆ ನನ್ನನ್ನು ಬಂಧಿಸಲಿ ಎಂದು ರಾಮುಲು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

