ಚಂದ್ರವಳ್ಳಿ ನ್ಯೂಸ್, ಚನ್ನಪಟ್ಟಣ:
ಚನ್ನಪಟ್ಟಣದ ಉಪಚುನಾವಣೆಯ ಆಂತರಿಕ ಸಮೀಕ್ಷೆಯ ವಿವರ ಯಾರೊಬ್ಬರಿಗು ಸಿಗುತ್ತಿಲ್ಲ , ಚುನಾವಣೆಯ ಗೆಲುವು ಸೋಲಿನ ಮುನ್ನೋಟದ ಸುದ್ದಿ ಮತ ಎಣಿಕೆಯ ನಂತರವೇ ಅರಿಯಬೇಕಿದೆ.
ಈ ಫಲಿತಾಂಶದ ಹಿನ್ನೆಲೆಯ ಸುದ್ದಿಗೆ ದೇಶವು ಎದುರು ನೋಡುತ್ತಿದ್ದೆ ಎಂದು ಭಾವಿಸಿದ್ದೇನೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ನಗಣ್ಯ.
ಈ ಚುನಾವಣೆಯ ಪ್ರತಿಷ್ಟೆ ಮಾಜೀ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಾಯಕತ್ವವನ್ನು ಪ್ರತಿಪಾದಿಸುವ ಚುನಾವಣೆ ಇದಾಗಿದೆ.
92 ವರ್ಷಗಳ ದೇವೇಗೌಡರ ಕಾಲಿನಲ್ಲಿ ನೋವು ಇದೆ ಎಂದು ಕೆಲವು ವರ್ಷಗಳಿಂದ ಕೇಳಿಬಂದಿದೆ. ಗೌಡರು ಇಬ್ಬರ ಸಹಾಯಕರ ಆಸರೆಯಲ್ಲಿಯೇ ವೇದಿಕೆ ಮೇಲೆ ನಿಂತು ರಾಜಕಾರಣದಲ್ಲಿ ಅವರು ನಡೆದು ಬಂದಿರುವ ವಿವರವನ್ನು ವಿವರಿಸುವ ಚಾಣಾಕ್ಷತೆ ನಾಡಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದಲ್ಲಿ ಮಾಡಿರುವಂತಹ ಕೆಲಸಗಳ ವಿವರಗಳನ್ನು ಗೌಡರು ಭಾಷಣದಲ್ಲಿ ವಿವರಿಸುತ್ತಿರುವ ಧೀಮಂತಿಕ್ಕೆಯನ್ನು ಗಮನಿಸಿದ ನಾಡಿನ ಬುದ್ಧಿಜೀವಿಗಳಿಗೆ ರಾಜಕಾರಣದ ಸಂಕಲ್ಪದ ಏನೆಂದು ಅರ್ಥವಾಗುತ್ತಿದೆ.
ಲೇಖನ-ರಘು ಗೌಡ 9916101265