ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಡಿ. ಅಂಜಿನಪ್ಪ ಕಲಾ ಸೇವಾ ಪ್ರತಿಷ್ಠಾನ ವತಿಯಿಂದ ಆಂದ್ರ ಪ್ರದೇಶದಲ್ಲಿ ಹಗಲು ವೇಷ ಕಲಾ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಲಾಯಿತು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮದ ಡಿ. ಅಂಜಿನಪ್ಪ ಕಲಾ ಸೇವಾ ಪ್ರತಿಷ್ಠಾನ ವತಿಯಿಂದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ನೆಮಕಲ್ಲು ಗ್ರಾಮದಲ್ಲಿ ಗ್ರಾಮೀಣ ಸಾಂಸ್ಕೃತಿಕ ಜಾನಪದಕಲೆಯಾದ ಹಗಲುವೇಷ ಮೋಹಿನಿ ಭಸ್ಮಾಸುರ ಕಥಾ ಪ್ರಸಂಗ ನಡೆಯಿತು.
ಕಲಾವಿದರು ಗ್ರಾಮದ ಮನೆ ಮನೆಗೆ ತೆರಳಿ ಮನ ರಂಜಿಸಿದರು. ಕಲಾ ಮೇಳ ಚಾಲನೆ ನೀಡಿ ಮಾತನಾಡಿದ ಡಿ ಅಂಜಿನಪ್ಪ ಹಗಲುವೇಷದಂತಹ ಕಲೆಗಳು ಇನ್ನೂ ಜೀವಂತ ಇವೆ. ಎಂತಹ ಆಧುನಿಕತೆ ಮೇಳೈಸಿದರು ಗ್ರಾಮೀಣ ಕಲೆಗಳು ಕಣ್ಮರೆಯಾಗುವುದಿಲ್ಲ ಎಂದು ಹೇಳಿದರು.
ಕಲಾ ಸೇವಾ ಪ್ರತಿಷ್ಠಾನ ಅಧ್ಯಕ್ಷ ಬಿ ಎಸ್ ಮಂಜಣ್ಣ ಮಾತಾನಾಡಿ ಹಗಲುವೇಷ ಕಲಾವಿದರು ವರ್ಷಕ್ಕೊಮ್ಮೆ ಗ್ರಾಮಕ್ಕೆ ಬಂದು ವೇಷ ಭೂಷಗಳು ಹಾಕಿಕೊಂಡು ಪ್ರದರ್ಶನ ನೀಡಿದರೆ ಮಳೆ ಬೆಳೆ ಸಮೃದ್ಧಿ ಯಾಗುತ್ತದೆ ಎಂದು ಪೂರ್ವಿಕರು ಗ್ರಾಮಸ್ಥರು ತಿಳಿಸುತ್ತಿದ್ದರು ಎಂದು ಹೇಳಿದ್ದಾರೆ.