ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸೈನಿಕರಿಗೆ ವಿನೂತನ ಸನ್ಮಾನ

News Desk

ಚಂದ್ರವಳ್ಳಿ ನ್ಯೂಸ್, ಮಧುಗಿರಿ:
ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ವತಿಯಿಂದ ಗುರುವಂದನೆ ಹಾಗೂ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

- Advertisement - 

ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥಾಪಕ ಪ್ರಾಚಾರ್ಯ ಮರಿಬಸಪ್ಪ ಮಾತನಾಡಿ, ಕಳೆದ 31 ವರ್ಷದ ಹಿಂದೆ ಪ್ರಾಚಾರ್ಯರಾಗಿ ಗಡಿನಡಾಡಿನಲ್ಲಿ ಕಾಲೇಜು ಪ್ರಾರಂಭಿಸಿದ್ದು, ಎಸ್ಸೆಸ್ಸೆಲ್ಸಿ ಮಕ್ಕಳು ಮಿಡಿಗೇಶಿಯಲ್ಲಿ ಪರೀಕ್ಷೆ ಬರೆಯಲು ಹೋಗಬೇಕಿತ್ತು. ಅದನ್ನು ತಪ್ಪಸಿ. .ಡಿ ಹಳ್ಳಿಯಲ್ಲಿಯೇ ಪರೀಕ್ಷೆ ಕೇಂದ್ರ ಪ್ರಾರಂಭಿಸಿದರು. ಗ್ರಾಮೀಣ ಹೆಣ್ಣು ಮಕ್ಕಳ ಕೌಶಲ್ಯ ಅಭಿವೃದ್ಧಿಗಾಗಿ ಟೈಲರಿಂಗ್ ಕೋರ್ಸುಗಳ ತಂದರು. ಗಡಿನಾಡಿನಲ್ಲಿ ಕನ್ನಡಿಗರ ಬಡಿದೆಬ್ಬಿಸಲು 2 ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕ.ಸಾ.ಪ ಅಧ್ಯಕ್ಷರಾಗಿ ಪ್ರೊ. ನಜೀರ್ ಅಹಮದ್ ರವ ಅದ್ಯಕ್ಷತೆಯಲ್ಲಿ ಸಮ್ಮೇಳನ ಸಂಘಟಿಸಿದರು ಎಂದು ಹೇಳಿದರು.

- Advertisement - 

.ಡಿ.ಹಳ್ಳಿ ಶಿವದೇವಾಲಯ ಜೀರ್ಣೋದ್ಧಾರಗೊಳಿಸಿದರು. ಗ್ರಾಮಾಂತರ ಬಸವ ಜಯಂತಿ ಸಂಘಟನೆ ಮಾಡಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಸವೇಶ್ವರ ನಾಟಕ ಆಡಿಸಿದರು. ಏನೂ ಇಲ್ಲದ ಕಡೆ ಹೋಗಿ ಒಂದು ಕಾಲೇಜ್ ಪ್ರಾರಂಭಿಸಿ ಇಂದಿಗೂ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾದ ಪ್ರಯುಕ್ತ ನನ್ನನ್ನು ಕರೆಸಿ ಗೌರವಿಸಿದ್ದೀರಿ,‌ ನಿಮಗೆ ಶುಭವಾಗಲಿ ಎಂದರು.

ಇದೇ ಸಂದರ್ಭದಲ್ಲಿ ಸೈನಿಕರನ್ನು ಹಾಗೂ ಸಂಸ್ಥೆ ಏಳ್ಗೆಗೆ ‌ಮರಿಬಸಪ್ಪನವರೊಂದಿಗೆ ದುಡಿದ ನಿವೃತ್ತ ಶಿಕ್ಷಕ ಉಪನ್ಯಾಸಕರುಗಳನ್ನು ಗೌರವಿಸಲಾಯಿತು.

- Advertisement - 

Share This Article
error: Content is protected !!
";