ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿಗಳ ಕಾಯ್ದೆಯನ್ವಯ ಶಿವಮೊಗ್ಗ ಜಿಲ್ಲೆಯ ‘ಬಿ’ ಮತ್ತು ‘ಸಿ’ ಪ್ರವರ್ಗ ಮುಜರಾಯಿ ದೇವಾಲಯಗಳ ಅರ್ಹ ಸದಸ್ಯರುಗಳನ್ನು ನಿಗದಿಪಡಿಸಿದ ಅರ್ಹತೆಗಳನುಸಾರ ವ್ಯವಸ್ಥಾಪನ ಸಮಿತಿಯನ್ನು ಮುಂದಿನ 3 ವರ್ಷಗಳ ಅವಧಿಗೆ ರಚಿಸಲು ಆಸಕ್ತ 25 ವರ್ಷ ವಯಸ್ಸಾಗಿರುವ ಭಕ್ತಾದಿಗಳು/ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಎಲ್ಲಾ ತಾಲೂಕು ತಹಶೀಲ್ದಾರ್ ಕಚೇರಿಯಿಂದ ಪಡೆದು, ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ/ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವವನ್ನು ಕೋರಿ ಅರ್ಜಿಯನ್ನು ನಿಗಧಿತ ನಮೂನೆ –1 (ಬಿ) (22ನೇ ನಿಯಮ)ರಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜೂ. 05 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.