ಬಿಜೆಪಿಯಿಂದ ಡಿಸಿಎಂ ಸ್ಥಾನದ ಆಫರ್ ಬಂದಿತ್ತು ಇದು ಬೆದರಿಕೆ ಸಂದೇಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಸ್ಥಾನದ ಆಫರ್ ಬಂದಿತ್ತು ಎನ್ನುವ ಹೇಳಿಕೆ ಕುರಿತು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಅಲ್ಲಗಳೆದಿದ್ದಾರೆ.

ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಸಿದ್ದರಾಮಯ್ಯನವರಿಗೆ ನೀಡಿದ ಬೆದರಿಕೆ ಸಂದೇಶವಷ್ಟೇ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.

- Advertisement - 

ಜವಾಬ್ದಾರಿ ಸ್ಥಾನದಲ್ಲಿರುವ ಡಿ.ಕೆ ಶಿವಕುಮಾರ್ ಅವರಿಗೆ ಯಾರು ಕರೆ ಮಾಡಿದ್ದರು, ಯಾವಾಗ ಕರೆ ಮಾಡಿದ್ದರು, ಯಾವ ನಂಬರ್‌ನಿಂದ ಕರೆ ಮಾಡಿದ್ದರು ಎಂಬುದನ್ನು ಡಿಕೆಶಿ ಅವರೇ ಬಹಿರಂಗಪಡಿಸಬೇಕು ಎಂದು ಅಶೋಕ್ ಒತ್ತಾಯಿಸಿದರು.

ಈ ಹೇಳಿಕೆಯು ಕಾಂಗ್ರೆಸ್ ನಾಯಕತ್ವಕ್ಕೆ ಸವಾಲು ಹಾಕುವ ಉದ್ದೇಶದಿಂದ ನೀಡಲಾಗಿದೆ. ಒಂದು ವೇಳೆ ಅಧಿಕಾರ ಹಂಚಿಕೆ ಆಗದಿದ್ದರೆ, ಡಿಕೆ ಶಿವಕುಮಾರ್ ಬೇರೆ ದಾರಿ ಹಿಡಿಯಬಹುದು ಎಂಬ ಸಂದೇಶವನ್ನು ಈ ಹೇಳಿಕೆಯ ಮೂಲಕ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಕ್ರಾಂತಿ ಆಗುವ ಮುನ್ಸೂಚನೆಗಳನ್ನು ಈ ಘಟನೆಗಳು ನೀಡುತ್ತಿವೆ ಎಂದೂ ಅಶೋಕ್ ಭವಿಷ್ಯ ನುಡಿದಿದ್ದಾರೆ.

- Advertisement - 

 

 

 

 

 

Share This Article
error: Content is protected !!
";