Ad imageAd image

ಶಿವಮೊಗ್ಗ ಮೂಲದ ಅಧಿಕಾರಿ ಕುಂದಾಪುರದ ಲಾಡ್ಜ್‌ನಲ್ಲಿ ಆತ್ಮಹತ್ಯೆ

khushihost

ಚಂದ್ರವಳ್ಳಿ ನ್ಯೂಸ್,  ಕುಂದಾಪುರ : ಶಿವಮೊಗ್ಗ ಮೂಲದ ಸರ್ಕಾರಿ ನೌಕರರೊಬ್ಬರು ಕುಂದಾಪುರದ ಲಾಡ್ಜ್‌ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ನಿನ್ನೆ ದಿನ ವರದಿಯಾಗಿದೆ.

ಕುಂದಾಪುರದ ಲಾಡ್ಜ್‌ ನಲ್ಲಿ ಆತ್ಮಹತ್ಯೆ

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಿಯ ಆರೋಗ್ಯ ನಿರೀಕ್ಷಕ ಪ್ರಶಾಂತ್‌ ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು.

ಇವರು ಶಿವಮೊಗ್ಗ ಮೂಲದವರು ಕುಂದಾಪುರದಲ್ಲಿ ಕೆಲಸ ಮಾಡುತ್ತಿದ್ದರು. 37 ವರ್ಷದ ಇವರು ಕುಡಿತದ ಚಟದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಪುಟ್ಟ ಸಂಸಾರ ಹೊಂದಿದ್ದ ಇವರನ್ನ ಇತ್ತೀಚೆಗಷ್ಟೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿತ್ತು. ನಿನ್ನೆ ಅಂದರೆ ಐದನೇ ತಾರೀಖು ಇವರು ಕುಂದಾಪುರದ ಲಾಡ್ಜ್‌ ಒಂದರಲ್ಲಿ ರೂಮ್‌ ಬುಕ್‌ ಮಾಡಿಕೊಂಡು ಉಳಿದುಕೊಂಡಿದ್ದರು.

ಈ ಬಳಿಕ ಇವರ ಶವ ಪತ್ತೆಯಾಗಿದ್ದು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವರು ತಮ್ಮ ಸ್ನೇಹಿತರ ಬಳಿಯಲ್ಲಿ ಜೀವನದ ಮೇಲಿನ ಜಿಗುಪ್ಸೆ ಬಗ್ಗೆ ಆಗಾಗ ಹೇಳಿಕೊಳ್ಳುತ್ತಿದ್ದರು ಎಂದು ಆಪ್ತರು ಪೊಲೀಸರಿಗೆ ತಿಳಿಸಿದ್ದಾರೆ. ಕುಂದಾಪುರ ಪೊಲೀಸ್‌ ಠಾಣೆ ಪೊಲೀಸರು ಕೇಸ್‌ ದಾಖಲಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";