ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದ ಏಕೀಕರಣವಾಗಿ ಸುಮಾರು 70 ವರ್ಷ ಕಳೆದರೂ ಅನೇಕ ಜಲ್ವಂತ ಸಮಸ್ಯೆಗಳು ಬಗೆಹರಿದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ, ಕೇಂದ್ರ ಸರಕಾರಕ್ಕೆ ಒತ್ತಾಯಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರದ ಮೂಲಕ ಕನ್ನಡ ಪಕ್ಷ ಮನವಿ ಮಾಡಿದೆ.
ರೈತರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಡಾ. ಸ್ವಾಮಿನಾಥನ್ ವರದಿ, ನೀರಾವರಿ ಯೋಜನೆಗಳಾದ ಮಟ್ಟಿ, ಮೇಕೆದಾಟು ಭದ್ರ ಮೇಲ್ದಂಡೆ ಯೋಜನೆ, ಕೃಷ್ಣ ನದಿ ತಿರುವು, ಬಯಲು ಸೀಮೆಯ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಎತ್ತಿನಹೊಳೆ ಪಾಲರ್, ಪೆನ್ನಾರ್, ಉತ್ತರ ಪಿನಾಕಿನಿ, ಅರ್ಕಾವತಿ, ನದಿಗಳ ನೀರಿಗಾಗಿ ಕರ್ನಾಟಕ ಏಕೀರಣವಾದ ನಂತರ ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು,
ರೈತ,ನೇಕಾರ ಸಂಘಟನೆಗಳು,ಹಲವಾರು ಜನಪರ ಸಂಘಟನೆಗಳು ನಿರಂತರವಾಗಿ ಈಗಲೂ ಚಳವಳಿಗಳನ್ನು ಮಾಡಿಕೊಂಡು ಬರುತ್ತಿವೆ. ಕೆಲವು ಯೋಜನೆಗಳು ಜಾರಿ ಯಾಗಗಿಲ್ಲ. ಇನ್ನು ಅನೇಕ ಸಂಸ್ಥೆಗಳು ಬಗೆಹರಿದಿಲ್ಲ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಮನದಟ್ಟು ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ ಎಂದು ಕನ್ನಡ ಪಕ್ಷ ಉಪಾಧ್ಯಕ್ಷ ಸಂಜೀವ್ ನಾಯಕ್ ತಿಳಿಸಿದ್ದಾರೆ.
ಪ್ರಧಾನಿ ಅವರೊಂದಿಗೆ ಚರ್ಚಿಸಿ:
ರಾಜ್ಯದ ನಾಡಿಮಿಡಿತ ತಿಳಿದಿರುವ ರಾಜ್ಯ ದಿಂದ ಸಂಸತ್ತಿಗೆ ಆಯ್ಕೆಯಾಗಿ, ಕೇಂದ್ರದ ಮಂತ್ರಿಗಳಾದ ಪ್ರಹ್ಲಾದ್ ಜೋಷಿ, ಸೋಮಣ್ಣ, ಶೋಬಾ ಕರಂದ್ಲಾಜೆ. ಎಚ್.ಡಿ.ಕುಮಾರಸ್ವಾಮಿ, ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್, ಲೋಕಸಭೆ ಸದಸ್ಯರಾದ ಯದುವೀರ್ ಒಡೆಯರ್, ರಾಜ್ಯದಲ್ಲಿ ಮಂತ್ರಿಗಳಾಗಿದ್ದ ರಮೇಶ್ ಜಿಗಜಿಗಣಿ, ಗೋವಿಂದ ಕಾರ್ ಜೋಳ, ಕೋಟ ಶ್ರೀನಿವಾಸ್‌ಪೂಜಾರಿ,
ಡಾ.ಕೆ ಸುಧಾಕರ್, ರಾಜಸಭೆ ಸದಸ್ಯ ರಾದ ಡಾ.ವಿರೇಂದ್ರ ಹೆಗ್ಗಡೆ. ಸುಧಾ ನಾರಾಯಣಮೂರ್ತಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿರಿಯ ಮಂತ್ರಿಗಳು ಸಂಸತ್ತು ನಡೆಯು ತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಬಳಿ ನಿಯೋಗ ತೆರಳಿ, ರಾಜ್ಯದ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

