ರೈಲಿಗೆ ಸಿಲುಕಿ ಅಪರಿಚಿತ ಯುವಕ ಸಾವು

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಅಪರಿಚಿತ ಯುವಕನೊಬ್ಬ ಮೃತಪಟ್ಟಿದ್ದಾನೆ. ನಿನ್ನೆ ಶಿವಮೊಗ್ಗ – ಭದ್ರಾವತಿ ನಡುವೆ ಹಳಿ ಮೇಲೆ ಶನಿವಾರ ಮೃತದೇಹ ಗಮನಿಸಿದ 16621 ರೈಲಿನ ಲೋಕೋ ಪೈಲೆಟ್‌ ನಿಲ್ದಾಣಕ್ಕೆ ಮಾಹಿತಿ ರವಾನಿಸಿದ್ದರು.

ರೈಲಿಗೆ ಸಿಲುಕಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದ. ಮೃತನಿಗೆ 25 ರಿಂದ 30 ವರ್ಷವಾಗಿದೆ. 5.4 ಅಡಿ ಎತ್ತರವಿದ್ದಾನೆ. ಬಲಗೈ ಭುಜದ ಬಳಿ ಅಮ್ಮ ಎಂಬ ಹಚ್ಚೆ ಇದೆ. ಗುಲಾಬಿ ಬಣ್ಣದ ಟೀ ಶರ್ಟ್‌, ಕಪ್ಪ ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಾನೆ.

ಘಟನೆ ಸಂಬಂಧ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ವಾರಸುದಾರರು ಇದ್ದಲ್ಲಿ ರೈಲ್ವೆ ಠಾಣೆ ದೂರವಾಣಿ ಸಂಖ್ಯೆ : 08182 222974 ಸಂಪರ್ಕಿಸಬಹುದು ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -  - Advertisement -  - Advertisement - 
Share This Article
error: Content is protected !!
";