ಚಂದ್ರವಳ್ಳಿ ನ್ಯೂಸ್, ತುಮಕೂರು:
ಕ್ಯಾತ್ಸಂದ್ರ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ವ್ಯಾಪ್ತಿ ಹೆಬ್ಬೂರು ಹೋಬಳಿ ನಾರಾಯಣ ಕೆರೆ ಬಳಿ ರಸ್ತೆ ಬದಿ ಪೆಟ್ಟಿಗೆಯೊಂದರಲ್ಲಿ ಸುಮಾರು ೪೦ ವರ್ಷದ ಮಹಿಳೆಯ ಶವ ಪತ್ತೆಯಾಗಿದ್ದು, ವಾರಸುದಾರರ ಬಗ್ಗೆ ತಿಳಿದು ಬಂದಿರುವುದಿಲ್ಲ.
ಮೃತ ಮಹಿಳೆಯು ೫ ಅಡಿ ಎತ್ತರ, ಕೋಲು ಮುಖ ಹೊಂದಿದ್ದು, ಮೃತಳ ದೇಹದ ಮೇಲೆ ಕಪ್ಪು ಬಣ್ಣದ ಬುರ್ಖಾ, ಹಳದಿ-ಕಪ್ಪು,-ಗೋಲ್ಡ್ ಬಣ್ಣದ ರವಿಕೆ, ಸಿಮೆಂಟ್ ಬಣ್ಣದ ಟ್ರ್ಯಾಕ್ ಪ್ಯಾಂಟ್, ಮಾಸಲು ಬಣ್ಣದ ಟೀ-ಶರ್ಟ್ ಇರುತ್ತದೆ.
ವಾರಸುದಾರರು ಇದ್ದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ದೂರವಾಣಿ ಸಂಖ್ಯೆ: ೦೮೧೬-೨೨೮೧೧೨೦, ೯೪೮೦೮೦೨೯೫೨, ೯೪೮೦೮೦೨೯೩೩ನ್ನು ಸಂಪರ್ಕಿಸಬಹುದಾಗಿದೆ ಎಂದು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.