ಜನರೊಂದಿಗೆ ಜನತಾದಳ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಬೆಂಬಲ

News Desk

ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ವಾಗತ ದೊರೆಯಿತು. ಕ್ಷೇತ್ರದ ಮಹಾಜನತೆ ತೋರಿದ ಈ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

- Advertisement - 

ಕ್ಷೇತ್ರಕ್ಕೆ ಆಗಮಿಸಿದ ವೇಳೆ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೃಹತ್ ಗಾತ್ರದ ಚಕ್ಕೋತ ಹಾರ, ಸೇಬಿನ ಹಾರ, ಗುಲಾಬಿ ಹಾರ ಹಾಕಿ ಪ್ರೀತಿಯಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು.

ಕಾರ್ಯಕರ್ತ ಬಂಧುಗಳು ನನ್ನೆಡೆಗೆ ತೋರಿದ ಪ್ರೀತಿಗೆ ಧನ್ಯ. ಸಮಸ್ತ ದೇವನಹಳ್ಳಿ ಕ್ಷೇತ್ರದ ಜನತೆಗೆ ಕೃತಜ್ಞನಾಗಿದ್ದೇನೆ ಎಂದು ನಿಖಿಲ್ ತಿಳಿಸಿದರು.

- Advertisement - 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ಪಕ್ಷದ ಮುಖಂಡರು ಹಾಗೂ ಹಿರಿಯ ಕಾರ್ಯಕರ್ತರೊಂದಿಗೆ ಉದ್ಘಾಟಿಸಿ, ಕಾರ್ಯಕರ್ತರ ಸಭೆ ಉದ್ದೇಶಿಸಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

ಜೆಡಿಎಸ್ ಪಕ್ಷವನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ 9964002028 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿಸುವ ಮೂಲಕ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಲು ಮುಖಂಡರಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಮನವಿ ಮಾಡಲಾಯಿತು. 

ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ, ದುರಾಡಳಿತ, ದೌರ್ಜನ್ಯ, ಹಗಲು ದರೋಡೆ, ರೈತರಿಗೆ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿರುವ ತೊಂದರೆಗಳನ್ನು ಕಾರ್ಯಕರ್ತರುಗಳಿಗೆ ತಿಳಿಸಿ, ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು  ರಾಜ್ಯದಿಂದ ಜನತೆ ಕಿತ್ತೆಸೆಯುತ್ತಾರೆ ಎಂದು ತಿಳಿಸಿ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ರವರು ಹಾಗೂ ಕುಮಾರಣ್ಣನವರು ನಾಡಿಗೆ ನೀಡಿದ ಕೊಡುಗೆಗಳನ್ನು ಮೆಲಕು ಹಾಕಿ, ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಮೂಲಕ 2028ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ನಿರಂತರವಾಗಿ ಶ್ರಮಿಸೋಣ ಎಂದು ತಿಳಿಸಲಾಯಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಆರೋಗ್ಯ ಹದಗೆಟ್ಟಿದಂತಿದೆ. ಯಾಕಂದ್ರೆ ಅವರ ಫೋಟೋವನ್ನು ನೋಡುತ್ತಿದ್ದರೆ ಕೈಗಳು ಸಣ್ಣದಾಗಿದ್ದು, ಮುಖದಲ್ಲಿ ಕಾಂತಿ ಕಾಣಿಸುತ್ತಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿವೆ.

ಇನ್ನು ಈ ಸಂಬಂದ ಇದೀಗ ಸ್ವತಃ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿದೆ, ಯಾರೂ ಆತಂಕ ಪಡಬೇಕಿಲ್ಲ. ಕೊನೆ ಉಸಿರಿರುವವರೆಗೂ ಜನಸೇವೆಗೆ ಬದುಕನ್ನ ಮುಡಿಪಿಟ್ಟಿದ್ದಾರೆ. ದೇವೇಗೌಡರು ಸಹ ರಾಜಕೀಯದಿಂದ ವಿಶ್ರಾಂತಿ ತೆಗೆದುಕೊಂಡಿಲ್ಲ. ದೇವೇಗೌಡರ ಕುಟುಂಬಕ್ಕೆ ಜನರೇ ರಾಜಕೀಯ ಶಕ್ತಿ ತುಂಬಿದ್ದಾರೆ. ಅದನ್ನ ಜನರಿಗೆ ವಾಪಸ್ ಧಾರೆ ಎರೆಯುವ ಕೆಲಸ ಮಾಡಬೇಕಿದೆ. ಸಣ್ಣಪುಟ್ಟ ಏರುಪೇರಾಗಿದ್ದು ಸತ್ಯ, ಆದ್ರೆ ಈಗ ಚೇತರಿಕೆಯಾಗುತ್ತಿದೆ. ಇದರ ಮಧ್ಯೆ ಪ್ರತಿನಿತ್ಯ ಇಲಾಖೆಯ ಸಭೆಗಳನ್ನು ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಶಾಸಕ ಬಿ‌.ಎನ್. ರವಿಕುಮಾರ್, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ್ ಮೂರ್ತಿ, ಮಾಜಿ ವಿಧಾನಪರಿಷತ್ ಸದಸ್ಯರಾದ ರಮೇಶ್ ಗೌಡ, ಚೌಡರೆಡ್ಡಿ, ಮಹಿಳಾ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಅಧ್ಯಕ್ಷ ಆರ್.ಮುನೇಗೌಡ,

ಪ್ರಧಾನ ಕಾರ್ಯದರ್ಶಿ ಜಿ‌.ಎ. ರವೀಂದ್ರ , ಮುಖಂಡರಾದ ಕುರುಬಗೆರೆ ನರಸಿಂಹಣ್ಣ, ಕೊಡಗುರ್ಕಿ ಮಂಜುನಾಥ್, ಮುನಿರಾಜು, ಲಕ್ಷ್ಮಣ, ಸಾದಹಳ್ಳಿ ಮಹೇಶ್,  ಕಲ್ಯಾಣ ಕುಮಾರ್, ಟಿ.ರವಿ, ಮೀನಾಕ್ಷಮ್ಮ, ಮಾರೇಗೌಡರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳುಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

 

 

Share This Article
error: Content is protected !!
";