ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಜಾಗತಿಕ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದ ಸೇನೆಯ ನಿಖರ ಮತ್ತು ವ್ಯೂಹಾತ್ಮಕ ದಾಳಿಗೆ ಜಗತ್ತೇ ನಿಬ್ಬೆರಗಾಗಿದೆ ಎಂದು ಬಿಜೆಪಿ ತಿಳಿಸಿದೆ.
ಈ ಹಿಂದೆ ನಡೆಸಲಾದ ಉರಿ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ವೈಮಾನಿಕ ದಾಳಿಗೂ ಸಾಕ್ಷಿ ಕೇಳಿದ್ದ ಕಾಂಗ್ರೆಸ್ ಈಗ ಆಪರೇಷನ್ ಸಿಂಧೂರ ಕಾರ್ಯಾಚರಣೆಗೂ ಸೇನೆಯು ಸಾಕಷ್ಟು ಸಾಕ್ಷಿ ನೀಡಿದ್ದರೂ ಸಹ ತನ್ನ ನೀಚ ಬುದ್ಧಿ ಪ್ರದರ್ಶಿಸಿದೆ. ತನ್ನ ಹಳೇ ಚಾಳಿ ಮುಂದುವರಿಸಿರುವ ಕಾಂಗ್ರೆಸ್ ಪಹಲ್ಗಾಮ್‌ಉಗ್ರದಾಳಿಯ ವಿರುದ್ಧವಾಗಿ ನಡೆದ ಆಪರೇಷನ್‌ಸಿಂಧೂರ ಕಾರ್ಯಾಚರಣೆಗೂ ಸಾಕ್ಷಿ ಕೇಳುತ್ತಿದೆ.
ಮುಂದೆ ಎಂದಾದರೂ ಉಗ್ರರ ವಿರುದ್ಧ, ಶತ್ರುಗಳ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಪರಿಸ್ಥಿತಿ ಬಂದಲ್ಲಿ ಕಾಂಗ್ರೆಸ್‌ರಾಷ್ಟ್ರೀಯ ನಾಯಕರನ್ನು ಯುದ್ಧ ವಿಮಾನಗಳಲ್ಲಿ ಕೂರಿಸಿಕೊಂಡು ಕಾರ್ಯಾಚರಣೆ ನಡೆಸಬೇಕು.
ಸೈನಿಕ ಕಾರ್ಯಾಚರಣೆ, ಯೋಧರ ಶೌರ್ಯವನ್ನು ಮುಂದೆಂದೂ ಅನುಮಾನಿಸಬಾರದು, ಸಾಕ್ಷ್ಯ ಕೇಳಬಾರದು ಆ ರೀತಿಯಲ್ಲಿ ದೇಶದೊಳಗಿರುವ ಶತ್ರುಗಳಿಗೆ ಭಯ ಹುಟ್ಟಿಸಬೇಕು.
ಭಯೋತ್ಪಾದಕರಂತೆ ಕಾಂಗ್ರೆಸ್‌ನಾಯಕರೂ ಭಾರತಕ್ಕೆ ಮಗ್ಗುಲ ಮುಳ್ಳಾಗಿ ಪರಿಣಮಿಸುತ್ತಿದ್ದಾರೆ. ದೇಶದೊಳಗಿನ ದ್ರೋಹಿಗಳ ವಿರುದ್ಧ ಒಂದು ತುರ್ತು ಆಪರೇಷನ್‌ನಡೆಸಬೇಕಾಗಿದೆ ಎಂದು ಬಿಜೆಪಿ ತಾಕೀತು ಮಾಡಿದೆ.