ಅಂಗನವಾಡಿ ಕಾರ್ಯಕರ್ತೆರ ಹುದ್ದೆ ಅರ್ಜಿ ಆಹ್ವಾನ ಜ.5ರವರಗೆ ಕಾಲಾವಕಾಶ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಚಿತ್ರದುರ್ಗ, ಭರಮಸಾಗರ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 64 ಅಂಗನವಾಡಿ ಕಾರ್ಯಕರ್ತೆ, 3 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 149 ಅಂಗನವಾಡಿ ಸಹಾಯಕಿಯರನ್ನು ಗೌರವ ಸೇವೆಯ ಮೇಲೆ ಭರ್ತಿ ಮಾಡಲು ಈ ಹಿಂದೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.

- Advertisement - 

ಈ ಬಗ್ಗೆ ಕಳೆದ ಜುಲೈ 29 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆಗಸ್ಟ್ 31 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಆನ್‌ಲೈನ್‌ನಲ್ಲಿ ಒಟ್ಟು 4 ಹಂತಗಳಲ್ಲಿ ಅರ್ಜಿ ಭರ್ತಿ ಮಾಡಬೇಕಾಗಿದ್ದು, ಮೊದಲ ಹಂತದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬುವುದು.

- Advertisement - 

ಎರಡನೇ ಹಂತದಲ್ಲಿ ಭಾವಚಿತ್ರ ಹಾಗೂ ಸಹಿ ಮಾದರಿ ಅಪ್‌ಲೋಡ್ ಮಾಡುವುದು. ಮೂರನೇ ಹಂತದಲ್ಲಿ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು. ನಾಲ್ಕನೇ ಹಂತದಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಇ-ಹಸ್ತಾಕ್ಷರದೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ ಕೆಲವರಿಗೆ ಮೊದಲನೇ ಹಂತದಲ್ಲಿಯೇ ಯಶಸ್ವಿಯಾಗಿ ಅರ್ಜಿ ಸ್ವೀಕೃತವಾಗಿದೆ ಎಂದು ಇಂಗ್ಲೀಷ್‌ನಲ್ಲಿ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗದೆ.

ಈ ಹಿನ್ನಲೆಯಲ್ಲಿ 1009 ಅರ್ಜಿಗಳಲ್ಲಿ 499 ಅರ್ಜಿಗಳು ಅಪೂರ್ಣವಾಗಿ ಸ್ವೀಕೃತವಾಗಿವೆ.
4 ಹಂತಗಳನ್ನು ಪೂರ್ಣಗೊಳಿಸದ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಡಿ.26 ರಿಂದ ಜನವರಿ 05 ಸಂಜೆ 5:30 ರವರೆಗೆ ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸದ ಜಿಲ್ಲೆಯ 499 ಅಭ್ಯರ್ಥಿಗಳ ವಿವರಗಳನ್ನು ಆಯಾ ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯಿತಿ,

- Advertisement - 

ಶಾಲೆಗಳು ಹಾಗೂ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಜುಲೈ 29ಕ್ಕೆ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಸಂಬAಧಿಸಿದ ದಾಖಲಾತಿಗಳನ್ನು ಮಾತ್ರ ಅರ್ಜಿ ಪರಿಶೀಲನೆಯಲ್ಲಿ ಪರಿಗಣಿಸಲಾಗುವುದು. ಷರತ್ತು ಹಾಗೂ ಮಾನದಂಡಗಳು ಇದೇ ಅಧಿಸೂಚನೆಗೆ ಒಳಪಟ್ಟಿರುತ್ತವೆ. ಸಂಬಂಧಿಸಿದ ಅಭ್ಯರ್ಥಿಗಳು  https://karnemakaone.kar.nic.in/abcd     ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";