ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ವೈಷ್ಣವ ಪರಂಪರೆ ಎಂಬ ವಿಷಯದ ಕುರಿತು ಮಹಾ ಪ್ರಬಂಧ ಮಂಡಿಸಿರುವ ಅನಿಲ್‌ಕುಮಾರ್ ಜಿ.ಸಿ. ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ.
ಹೊಳಲ್ಕೆರೆ ಪಟ್ಟಣದ ರುದ್ರಮ್ಮ, ಚಂದ್ರಪ್ಪ ಜಿ.ಆರ್. ದಂಪತಿಗಳ ಪುತ್ರ ಅನಿಲ್‌ಕುಮಾರ್ ಜಿ.ಸಿ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಡಾ.ಸಿದ್ದಲಿಂಗಮ್ಮ ಬಿ.ಜಿ. ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.