ನಗರಸಭೆ ನೂತನ ಅಧ್ಯಕ್ಷರಾಗಿ ಅನಿತಾ ರಮೇಶ್ ಅವಿರೋಧ ಆಯ್ಕೆ

News Desk

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರಸಭೆ ಅಧ್ಯಕ್ಷರಾಗಿ ೨೦ ನೇ ವಾರ್ಡ್ ಸದಸ್ಯೆ ಎಂ.ಪಿ.ಅನಿತಾ ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾದರು.

ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರರವರ ರಾಜೀನಾಮೆಯಿಂದ ತೆರೆವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಎಂ.ಪಿ.ಅನಿತಾ ಒಬ್ಬರೆ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿರವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

- Advertisement - 

ಹನ್ನೊಂದು ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ಸದಸ್ಯ ಜೈನುಲ್ಲಾಬ್ದಿನ್ ಸೂಚಕರಾಗಿದ್ದರು, ಮತ್ತೊಬ್ಬ ಸದಸ್ಯ ದೀಪಕ್ ಅನುಮೋದಿಸಿದರು.

೩೫ ನಗರಸಭೆ ಸದಸ್ಯರುಗಳಿದ್ದು, ಶಾಸಕ, ಸಂಸದ ಸೇರಿದಂತೆ ಒಟ್ಟು ೩೭ ಮತಗಳ ಪೈಕಿ ೨೯ ಸದಸ್ಯರುಗಳು ಚುನಾವಣೆಯಲ್ಲಿ ಹಾಜರಿದ್ದರು. ಎಂಟು ಸದಸ್ಯರುಗಳು ಗೈರಾಗಿದ್ದರು.

- Advertisement - 

ಎಂ.ಪಿ.ಅನಿತಾರವರು ಅಧ್ಯಕ್ಷರಾಗುತ್ತಿದ್ದಂತೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ ಹಾಗೂ ಸದಸ್ಯರುಗಳು, ಪೌರಾಯುಕ್ತರಾದ ಲಕ್ಷ್ಮಿ ಇವರುಗಳು ನೂತನ ಅಧ್ಯಕ್ಷರಿಗೆ ಹೂಗುಚ್ಚ ನೀಡಿ ಶುಭ ಹಾರೈಸಿದರು.

ಡೊಳ್ಳು, ತಮಟೆ ಕುಣಿತದೊಂದಿಗೆ ತೆರೆದ ವಾಹನದಲ್ಲಿ ಎಂ.ಪಿ.ಅನಿತಾ ಹಾಗೂ ಅವರ ಪತಿ ನಗರಸಭೆ ಮಾಜಿ ಸದಸ್ಯ ಟಿ.ರಮೇಶ್ ಇವರುಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನೂರಾರು ಅಭಿಮಾನಿಗಳು ನೂತನ ಅಧ್ಯಕ್ಷೆ ಎಂ.ಪಿ.ಅನಿತಾರವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.

 

Share This Article
error: Content is protected !!
";