ಗಮನ ಸೆಳೆದ ವಾರ್ಷಿಕ ಆಟೋಟ ಸ್ಪರ್ಧೆಗಳು

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಸಂಕ್ರಮಣದ ಹೊತ್ತು ಸೂರ್ಯನು ತನ್ನ ಪಥ ಬದಲಿಸುವಾಗ ಚಳಿಯಿಂದ ಹೊರಬರಲು ರೈತರು ತಮ್ಮ ರಾಸುಗಳನ್ನು ಕಿಚ್ಚಾಯಿಸುವಂತೆ ದೆಹಲಿಯ ಚಳಿಯು ಸಂಕ್ರಾಂತಿ ನಂತರ ಕಡಿಮೆ ಆಗುತ್ತಾ ಬಂದಿತ್ತು. ಅಂತಹ ಸಮಯದಲ್ಲೇ ಚಳಿಯ ಜಾಡ್ಯದಿಂದ ಮೈ ಕೊಡವಿಕೊಂಡು ಹೊರಗೆ ಬರಲೆಂಬಂತೆ ದೆಹಲಿ ಕನ್ನಡ ಶಾಲೆಯ ಆವರಣದಲ್ಲಿ ದೆಹಲಿ ಕನ್ನಡ ಸಂಘದವತಿಯಿಂದ ವಾರ್ಷಿಕ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

- Advertisement - 

ಆ ಸ್ಪರ್ಧೆಗಳಲ್ಲಿ ಮಕ್ಕಳಿಂದ ವಯಸ್ಕರರವರೆಗೂ ಆಡಬಹುದಾದಂತಹ ವಾಲಿಬಾಲ್, ಕಬಡ್ಡಿ, ಬ್ಯಾಡ್ಮಿಂಟನ್, ಶಾಟ್ಪುಟ್, ಓಟಗಳು ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ಥ್ರೋ ಬಾಲ್, ಮಕ್ಕಳಿಗಾಗಿ ಅಥ್ಲೆಟಿಕ್ಸ್ ಇನ್ನು ಮುಂತಾದ ಆಟಗಳಿದ್ದವು. ಆ ಆಟೋಟಗಳಲ್ಲಿ ದೆಹಲಿಯಲ್ಲಿನ ಕನ್ನಡಿಗರು ಭಾಗವಹಿಸಿ ಆಡಿ ಸೋತು-ಗೆದ್ದು ಖುಷಿಪಟ್ಟರು.

- Advertisement - 

ಆಟೋಟ ಸ್ಪರ್ಧೆಗಳಲ್ಲಿ ಭಾರತೀಯ ವಾಯು ಸೇನೆಯ ಕರ್ನಾಟಕ ಏರ್ ಸ್ಟ್ರೈಕರ್ (Karnataka Airstricker) ತಂಡವು ಅತಿ ಹೆಚ್ಚಿನ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾಗಿ ಸಿಂಹ ಪಾಲು ಪಡೆದಿದ್ದು ವಿಶೇಷ.

- Advertisement - 

ದೆಹಲಿ ಕನ್ನಡ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರು ಉತ್ಸಾಹದ ಚಿಲುಮೆಯಂತೆ ಎಲ್ಲರಿಗೂ ಉರಿದುಂಬಿಸುತ್ತಾ ಆಟೋಟಗಳನ್ನು ಯಶಸ್ವಿಯಾಗಿಸಿದರು ಎಂದು ನವ ದೆಹಲಿ ಉಪ ನಿರೀಕ್ಷಕರಾದ ವೆಂಕಟೇಶ ಹೆಚ್ ಚಿತ್ರದುರ್ಗ ಅವರು ಮಾಹಿತಿ ನೀಡಿದ್ದಾರೆ.

 

 

Share This Article
error: Content is protected !!
";