ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಮ್ಮ ಹಳ್ಳಿ ಥಿಯೇಟರ್ ನೀಡುವ 2024 – 25 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದ್ದು ರಂಗಭೂಮಿಯ ಸಾಧನೆಗಾಗಿ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಡಾ.ಗಜಾನನ ಶರ್ಮ ಹಾಗೂ ಸಮಾಜಸೇವೆಗಾಗಿ ಡಾ.ಸಂಧ್ಯಾಕಾವೇರಿಯವರಿಗೆ ಪ್ರಶಸ್ತಿ ಪ್ರಕಟವಾಗಿದೆ ಎಂದು ನಮ್ಮ ಹಳ್ಳಿ ಥಿಯೇಟರ್ ತಂಡದ ಅಧ್ಯಕ್ಷರು ತಿಳಿಸಿದ್ದಾರೆ.
ಪ್ರಶಸ್ತಿಯು ನಗದು, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು ಈ ಹಿಂದೆ ಈ ಪ್ರಶಸ್ತಿಗೆ ಪದ್ಮಶ್ರೀ ಹಾಜಬ್ಬ, ಡಾ.ವಿ.ಎಲ್.ಎಸ್ ಕುಮಾರ್, ಡಾ.ರಜನಿ.ಎ.ಪೈ, ಮಾಲತಿ.ಎಸ್, ಸಂದೇಶ್ ಜವಳಿ, ಪುರುಷೋತ್ತಮ ತಲವಾಟ, ಸೇತುರಾಂರವರು ಭಾಜನರಾಗಿದ್ದರು.