ಅನಾಮಧೇಯ 3 ಮೃತ ವ್ಯಕ್ತಿಗಳ ಗುರುತು ಪತ್ತೆಗೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ಅನಾಮಧೇಯ ವ್ಯಕ್ತಿಗಳು ಮೃತರಾದ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ನಗರದ ಎಂ.ಜಿ. ಸರ್ಕಲ್ ಬಳಿ ಇರುವ ಕೆಗ್ ಮತ್ತು ಪೆಗ್ ಬಾರ್ ಹತ್ತಿರದ ಮೆಟ್ಟಿಲುಗಳ ಬಳಿ 2025 ಮಾರ್ಚ್ 24 ರಂದು ಅನಾಮಧೇಯ ಗಂಡು ವ್ಯಕ್ತಿ ಮೃತರಾಗಿರುತ್ತಾರೆ. ಮೃತ ವ್ಯಕ್ತಿ ಸುಮಾರು 60 ವರ್ಷದವರಾಗಿದ್ದು, 5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈ ಬಣ್ಣ, ಬಡಕಲು ಶರೀರವನ್ನು ಹೊಂದಿದ್ದು, ಕಪ್ಪು ಬಿಳಿಪು 3 ಇಂಚು ಉದ್ದದ ಕೂದಲು ಹಾಗೂ ಗಡ್ಡ ಮೀಸೆ ಹೊಂದಿರುತ್ತಾನೆ. ಮೃತನ ವ್ಯಕ್ತಿ ಮಾಸಲು ಬಣ್ಣದ ಗುಲಾಬಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.

- Advertisement - 

ನಗರದ ಸಂಚಾರಿ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ಬಳಿ ಇರುವ ಪುಟ್‍ಪಾತ್ ಮೇಲೆ 2025 ಜುಲೈ 18 ರಂದು ನಿತ್ರಾಣವಾಗಿ ಬಿದ್ದಿದ್ದ ಅನಾಮಧೇಯ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ 2025 ಜುಲೈ 31 ರಂದು ಮೃತರಪಟ್ಟಿರುತ್ತಾನೆ. ಅನಾಮಧೇಯ ಮೃತ ವ್ಯಕ್ತಿ ಸುಮಾರು 75 ವರ್ಷದವರಾಗಿದ್ದು, 5.5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟನ್ನು ಹೊಂದಿದ್ದು, ತಲೆಯಲ್ಲಿ 3 ಇಂಚು ಬಿಳಿ ಕೂದಲು ಹಾಗೂ ಬಿಳಿ ಗಡ್ಡಮೀಸೆ ಹೊಂದಿರುತ್ತಾರೆ.

ನಗರದ  ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಪಕ್ಕದಲ್ಲಿರುವ ಯೂನಿಯನ್ ಪಾರ್ಕ್ ಬಳಿಯ ಪುಟ್‍ಪಾತ್ ಮೇಲೆ 2025 ಏಪ್ರಿಲ್ 7 ರಂದು ಅನಾಮಧೇಯ ವ್ಯಕ್ತಿಯು ಮೃತರಾಗಿರುತ್ತಾನೆ.  

- Advertisement - 

ಈ ವ್ಯಕ್ತಿ ಸುಮಾರು 60  ವರ್ಷದವರಾಗಿದ್ದು. 5.2 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, ದೃಡಕಾಯ ಶರೀರವನ್ನು ಹೊಂದಿರುತ್ತಾರೆ, ತಲೆಯಲ್ಲಿ ಬಿಲಿಕೂದಲು ಹಾಗೂ ಕುರುಚಲು ಬಿಳಿಗಡ್ಡ ಮೀಸೆಯನ್ನು ಹೊಂದಿದ್ದು, ಮೃತರಾದ ಸಮಯದಲ್ಲಿ ಅರ್ಧ ತೋಳಿನ ಬಿಳಿ ಬಣ್ಣದ ಟೀ ಶರ್ಟ್, ಗೆರೆಗಳಿರುವ ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಇವರು ಗುರುತು ಪತ್ತೆಯಾದವರು ಕೋಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194222933, 9480803145, ಪೊಲೀಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ 08194222430, 9480803120, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194222782 ಗೆ ಕರೆ ಮಾಡುವಂತೆ ಕೋರಲಾಗಿದೆ.

 

 

 

Share This Article
error: Content is protected !!
";