ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕಿನ ಹೊನ್ನೇಕೆರೆ ಗುಡ್ಡದಲ್ಲಿ ಸುಮಾರು 65-70 ವರ್ಷದ ಪುರುಷನ ಶವ ಪತ್ತೆಯಾದ ಕುರಿತು ಮಾರ್ಚ್ 19ರಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಮಧೇಯ ವ್ಯಕ್ತಿಯು 5.3 ಅಡಿ ಎತ್ತರ, ಸಣಕಲು ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಸುಮಾರು 02 ಇಂಚು ಬಿಳಿ ಕೂದಲು, ಕಪ್ಪು ಮೈ ಬಣ್ಣ, ಶವವು ಸಂಪೂರ್ಣಗಾಗಿ ಕೊಳೆತು ಹೋಗಿದ್ದು, ಮೂಳೆಗಳು ಕಾಣುತ್ತಿರುತ್ತವೆ. ಶವದ ಮೈಮೇಲೆ ಬಿಳಿ ಅಂಗಿ ಮತ್ತು ನೀಲಿ, ಬಳಿ ಮತ್ತು ಕಪ್ಪು ಗೀರುಳ್ಳ ಟವೆಲ್ ಧರಿಸಿರುತ್ತಾರೆ.
ಮೃತ ಅನಾಮಧೇಯ ವ್ಯಕ್ತಿಯ ಕುರಿತು ಮಾಹಿತಿ ತಿಳಿದುಬಂದಲ್ಲಿ ಹೊಳಲ್ಕೆರೆ ಪೊಲೀಸ್ ಠಾಣೆ 08191-275233, 9480803151 ಗೆ ಸಂಪರ್ಕಿಸಬಹುದು ಎಂದು ಹೊಳಲ್ಕೆರೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.