ಅನಾಮಧೇಯ ಸತೀಶ್ ಗೌಡನಿಗೂ ಪಕ್ಷಕ್ಕೂ ಸಂಬಂಧವಿಲ್ಲ-ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಹಿರಿಯೂರು ತಾಲೂಕು  ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ ಅವರಿಗೆ ದೂರವಾಣಿ ಕರೆ ಮಾಡಿ, ತಾಲೂಕು ಅಭಿವೃದ್ಧಿ, ರೈತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೆ ವಿವಿ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿರುವ ವಿಷಯ ಕೇಳಿ ತುಂಬಾ ಸಂತೋಷ ವ್ಯಕ್ತಪಡಿಸಿದರು.

ರೈತರು ಮತ್ತು ಬಡವರು ಕೂಲಿ ಕಾರ್ಮಿಕರು ಪರವಾಗಿ ನಮ್ಮ ಪಕ್ಷ ಹೋರಾಟ ಮಾಡಬೇಕೆಂದು ತಿಳಿಸಿ ವಿಧಾನಸಭಾ ಕ್ಷೇತ್ರದ ರಾಜಕೀಯ ವಿದ್ಯಾಮಾನಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನೆಡೆಸಿದರು.

- Advertisement - 

 ಸತೀಶ್ ಗೌಡ ಎಂಬ ವ್ಯಕ್ತಿ 2028ನೇ ಚುನಾವಣೆಯ ಅಭ್ಯರ್ಥಿ ನಾನೇ ಎಂದು ಸುಳ್ಳು ಹೇಳಿಕೊಂಡು ಪಕ್ಷದ ಸಂಘಟನೆಯಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಸತೀಶ್ ಗೌಡ ಎಂಬ ಅನಾಮಧೇಯ  ವ್ಯಕ್ತಿಗೂ ಜೆಡಿಎಸ್ ಪಕ್ಷಕ್ಕೂ ಯಾವುದೇ ಸಂಬಂಧವಿರುವಿದಿಲ್ಲ.

ಆದಕಾರಣ ಅವರು ಮುಂದೇನಾದರೂ ಪಕ್ಷದ ವರಿಷ್ಠರ ಭಾವಚಿತ್ರಗಳು, ಪಕ್ಷದ ಚಿಹ್ನೆ, ಶಾಲು ಬಳಕೆ ಮಾಡಿಕೊಂಡು ಸಂಘಟನೆಯಲ್ಲಿ ಗೊಂದಲ ಮೂಡಿಸಿದರೆ ನಿರ್ಧಕ್ಷಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

- Advertisement - 

ಪಕ್ಷದ ಮುಖಂಡರುಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇಂತಹ ವ್ಯಕ್ತಿಗಳೊಂದಿಗೆ ಸೇರಿಕೊಂಡು ಪಕ್ಷವಿರೋಧ ಚಟುವಟಿಕೆಗಳನ್ನು ನೆಡೆಸುತ್ತಿರುವುದು ಕಂಡು ಬಂದರೆ ಅಂತಹ ಮುಖಂಡರುಗಳ ವಿರುದ್ದ ಪಕ್ಷದಿಂದ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";