ಕಾಂಗ್ರೆಸ್‌ನ ಮತ್ತೊಂದು ಟೂಲ್‌ಕಿಟ್ ಸುಳ್ಳೆಂದು ಸಾಬೀತು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷವು ಬಿಜೆಪಿ ಮೇಲೆ ಸುಳ್ಳಿನ ಆರೋಪವನ್ನೇ ಹೆಣೆದು ರಾಜ್ಯದ ಜನತೆಯನ್ನು ವಂಚಿಸಿ ಅಧಿಕಾರಕ್ಕೆ ಏರಿತ್ತು. ಇದೀಗ ಒಂದೊಂದೇ ಆರೋಪಗಳು ಸುಳ್ಳೆಂದು ಸಾಬೀತಾಗುತ್ತಿವೆ ಎಂದು ಬಿಜೆಪಿ ತಿಳಿಸಿದೆ.

- Advertisement - 

ಕರ್ನಾಟಕ ಕಾಂಗ್ರೆಸ್ ಪಕ್ಷವು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಸಂಪೂರ್ಣ ಸುಳ್ಳು ಎಂಬುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿತ್ತು.‌ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರವು ಎಸ್‌ಐಟಿ ರಚಿಸಿತ್ತು.

- Advertisement - 

ಇದೀಗ ಎಸ್ಐಟಿಯು ಬಿಜೆಪಿ ನಾಯಕರ ವಿರುದ್ಧದ ಆರೋಪಗಳಿಗೆ ಪುರಾವೆ ಸಿಗದೆ ತನ್ನ ತನಿಖೆಗೆ ಅಂತ್ಯ ಹೇಳಲು ನಿರ್ಧರಿಸಿದೆ. ಈ ಮೂಲಕ ಕಾಂಗ್ರೆಸ್‌ನ ಮತ್ತೊಂದು ಟೂಲ್‌ಕಿಟ್ ಸುಳ್ಳೆಂದು ಸಾಬೀತಾಗಿದೆ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ಸಿಗರೇ ಇನ್ನಾದರೂ ಸುಳ್ಳಿನ ರಾಜಕೀಯ ಬದಿಗಿಟ್ಟು, ನೈತಿಕ ರಾಜಕಾರಣ ನಡೆಸಿ…! ಎಂದು ಬಿಜೆಪಿ ತಾಕೀತು ಮಾಡಿದೆ.

- Advertisement - 

 

 

Share This Article
error: Content is protected !!
";