ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿಷ್ಟೆ , ಪ್ರಾಮಾಣಿಕತೆ ಹಾಗೂ ಸ್ವಾಭಿಮಾನಕ್ಕೆ ಮಹಿಳೆಯರ ಮನೋಭಾವ ಉತ್ತಮ. ಪ್ರಗತಿಪರ ಮುನ್ನುಡಿಯಾಗಿ ಸಾಮಾಜಿಕ ತತ್ವದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ದಿಟ್ಟತನದಲ್ಲಿ ಬೆಳೆಯಬೇಕು.
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು. ಮಹಿಳಾ ದಿನಾಚರಣೆಯ ಈ ದಿನದಂದು ಮಹಿಳೆಯರ ಪ್ರಬುದ್ಧತೆಯ ಸಾಮರ್ಥ್ಯವನ್ನು ಗೌರವಿಸುತ್ತೇನೆ.
ಹಲವಾರು ದಶಕಗಳ ಹಿಂದಿನ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ಹೆಣ್ಣು ಅಡುಗೆ ಮನೆಗೆ ಸೀಮಿತ ಎಂಬ ಮಾತಿತ್ತು. ಕಾಲಗಳು ಉರುಳಿದಂತೆ ಮಹಿಳೆಯರು ಅವರಲ್ಲಿರುವ ಬುದ್ಧಿಶಕ್ತಿಯನ್ನು ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಬಲವಾಗಿ ಬೆಳೆದಿದ್ದಾರೆ ಇದಕ್ಕೆ ಸಾಕ್ಷಿ=ಗುಡ್ಡೆಗಳು ಸಾಕಷ್ಟಿವೆ. ವಿದ್ಯೆ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಗೌರವ ಹೊಂದಿರುವ ಪ್ರಬಲ ಮಹಿಳೆಯರಿಂದ ಸಮಾಜದ ಉನ್ನತಿ ಸಾಧ್ಯವಾಗುತ್ತಿದೆ.
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉದ್ಯೋಗ ಕ್ಷೇತ್ರದಲ್ಲಿ ಗಂಡಿಗೆ ಸರಿಸಮಾನವಾಗಿ ದುಡಿಯುತ್ತಿರುವ ಮಹಿಳೆಯರ ಸಾಧನೆಗೆ ಈ ದಿನಮಾನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಗೌರವ ಕಂಡುಬರುತ್ತಿದೆ. ಮನೆ=ಮನದಲ್ಲಿ ನಂದಾ ದೀಪ ಉರಿಸಿ, ಹೊತ್ತು ಹೊತ್ತಿಗೆ ಮನೆಯಲ್ಲಿ ಇರುವವರಿಗೆ ಅನ್ನ ಉಣಿಸಿ, ಕುಟುಂಬದ ಸಂಪೂರ್ಣ ಜವಾಬ್ದಾರಿ ಜೊತೆಜೊತೆಗೆ ಸಾಮಾಜಿಕವಾಗಿ ಗುರುತಿಸಿಕೊಂಡ ಸ್ತ್ರೀಯರಿಗೆ ಭಾರತದ ಪರಂಪರೆಯಲ್ಲಿ ಅಪಾರ ಗೌರವವಿದೆ. ಲೇಖನ-ರಘು ಗೌಡ